ADVERTISEMENT

ಗಣಗಲೂರು: ಡಿಜಿಟಲ್ ಗ್ರಂಥಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 1:44 IST
Last Updated 30 ಅಕ್ಟೋಬರ್ 2025, 1:44 IST
ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಗಣಗಲೂರು ಗ್ರಾಮ ಪಂಚಾಯತಿ ಕಟ್ಟಡದ ನವೀಕರಣ ಮತ್ತು ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು
ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಗಣಗಲೂರು ಗ್ರಾಮ ಪಂಚಾಯತಿ ಕಟ್ಟಡದ ನವೀಕರಣ ಮತ್ತು ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು   

ಅನುಗೊಂಡನಹಳ್ಳಿ(ಹೊಸಕೋಟೆ): ಹೋಬಳಿಯ ಗಣಗಲೂರು ಗ್ರಾಮ ಪಂಚಾಯತಿ ಕಟ್ಟಡದ ನವೀಕರಣ ಮತ್ತು ನೂತನ ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ₹20 ಲಕ್ಷ ವೆಚ್ಚದಲ್ಲಿ ಗಣಗಲೂರು ಗ್ರಾಮ ಪಂಚಾಯತಿ ಕಟ್ಟಡದಲ್ಲಿನ ಕೋಣೆಗಳಿಗೆ ಸುಣ್ಣಬಣ್ಣ, ಟೇಬಲ್, ಚೇರ್, ಕಂಪ್ಯೂಟರ್ ಮೊದಲಾದ ಕೆಲಸ ಮಾಡಿಸಿ ಉನ್ನತಿಕರಿಸಲಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾ ಪ್ರಪಂಚದಲ್ಲಿ ಗ್ರಾಮಾಂತರ ಪ್ರದೇಶದ ಮಕ್ಕಳು ಯಶಸ್ಸನ್ನು ಗಳಿಸಲು ಅನುಕೂಲವಾಗಲೆಂದು ಡಿಜಿಟಲ್ ಗ್ರಂಥಾಲಯ ಮತ್ತು ಪತ್ರಿಕೆ ಓದಲು ಪ್ರತ್ಯೇಕ ಕೋಣೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಗಣಗಲೂರು ಗ್ರಾಮವು ಜಿಲ್ಲೆ ಮತ್ತು ಹೊಸಕೋಟೆ ತಾಲ್ಲೂಕಿನ ಗಡಿಗ್ರಾಮವಾಗಿರುವ ಕಾರಣ ಗ್ರಾಮಸ್ಥರ ಮನವಿಯಂತೆ ಮುಂದಿನ ದಿನಗಳಲ್ಲಿ ₹1.15 ಕೋಟಿಯಷ್ಟು ಗಡಿನಾಡು ಅಭಿವೃದ್ದಿ ಅನುದಾನವನ್ನು ಬಳಸಿಕೊಂಡು ಗಣಗಲೂರು ಗ್ರಾಮಪಂಚಾಯತಿಯ ಗಡಿ ಗ್ರಾಮಗಳಲ್ಲಿ ಮತ್ತಷ್ಟು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗವುದು ಎಂದು ತಿಳಿಸಿದರು.

ADVERTISEMENT

ಗಣಗಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ಜಯರಾಂ, ಉಪಾಧ್ಯಕ್ಷೆ ಸಂಧ್ಯಾರಾಣಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಮಹೇಶ್, ಕಾರ್ಯದರ್ಶಿ ಎಚ್.ಎಂ. ಮಂಜುನಾಥ್, ಯಲ್ಲಪ್ಪ, ಧನಲಕ್ಷ್ಮಿ, ಸಾವಿತ್ರಮ್ಮ, ನಾರಾಯಣಸ್ವಾಮಿ, ಸೀನಪ್ಪ, ಷರೀಫ್, ಕೃಷ್ಣವೇಣಿ, ಬಾಬು ಮಂಜುಳಮ್ಮ ಉಪಸ್ಥಿತರಿದ್ದರು.

ನಾನೇನು ಸಚಿವ ಆಕಾಂಕ್ಷಿ ಅಲ್ಲ ಸರ್ಕಾರ ಮತ್ತು ಹೈಕಮಾಂಡ್ ಸಚಿವಸ್ಥಾನ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುವೆ ನವೆಂಬರ್ ಕ್ರಾಂತಿ ಅಂತೆ ಕಂತೆಗಳ ಊಹಾಪೋಹ ಅದರಲ್ಲಿ ಯಾವ ಸತ್ಯವೂ ಇಲ್ಲ
ಶರತ್‌ ಬಚ್ಚೇಗೌಡಶಾಸಕ(ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.