ADVERTISEMENT

ದೊಡ್ಡಬಳ್ಳಾಪುರ: ಕೊಲೆ ಆರೋಪದ ಮೇಲೆ ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 3:12 IST
Last Updated 17 ಜನವರಿ 2026, 3:12 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ದೊಡ್ಡಬಳ್ಳಾಪುರ: ಮಹಿಳೆ ಹತ್ಯೆ ಆರೋಪಿಯೊಬ್ಬರು ತನ್ನ ಸ್ವಗ್ರಾಮ ತಾಲ್ಲೂಕಿನ ಕೋಳೂರಿಗೆ ಬಂದು ಮಂಗಳವಾರ ರಾತ್ರಿ ನೇಣಿ ಹಾಕಿಕೊಂಡಿದ್ದಾರೆ.

ಕೋಳೂರಿನ ವೀರಭದ್ರಪ್ಪ(60) ನೇಣಿಗೆ ಶರಣದವರು.  

ADVERTISEMENT

ಮೃತ ವೀರಭದ್ರಪ್ಪ ಚಿಕ್ಕಬಾಣವಾರದಲ್ಲಿ ವಾಸವಿದ್ದರು. ಸೋಮವಾರ ಹಣಕಾಸಿನ ವ್ಯವಹಾರದ ಹಿನ್ನೆಲೆ ದಾಕ್ಷಾಯಿಣಿ ಎನ್ನುವ ಮಹಿಳೆಯನ್ನು ಕೊಂದು ಪರಾರಿಯಾಗಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಲೆ ಮರೆಸಿಕೊಂಡಿದ್ದ ವೀರಭದ್ರಪ್ಪ ಮಂಗಳವಾರ ರಾತ್ರಿ ಸ್ವಗ್ರಾಮ ಕೋಳೂರಿಗೆ ಬಂದು ಗ್ರಾಮದ ರಸ್ತೆ ಬದಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.