
ಪ್ರಜಾವಾಣಿ ವಾರ್ತೆ
ದೊಡ್ಡಬಳ್ಳಾಪುರ: ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ 2023-24ನೇ ಸಾಲಿನ ಅಕಾಡೆಮಿ ಬಾಲ ಗೌರವ ಪ್ರಶಸ್ತಿಗೆ ನಗರದ ಯೋಗ ಪ್ರತಿಭೆ ಎಂ.ಆರ್.ಜಾಹ್ನವಿ ಆಯ್ಕೆಯಾಗಿದ್ದಾಳೆ.
ತಾಲ್ಲೂಕಿನ ಯೋಗಪಟು ನಗರದ ಎಂ.ಎಸ್.ರವಿಕುಮಾರ್ ಮತ್ತು ಎಂ.ಆರ್.ರತ್ನ ಅವರ ಪುತ್ರಿ ಎಂ.ಆರ್. ಜಾಹ್ನವಿ ನಿಸರ್ಗ ಯೋಗ ಕೇಂದ್ರದಲ್ಲಿ ತರಬೇತಿ ಪಡೆದು ನಾಗಾರ್ಜುನ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವಿವಿಧ ಯೋಗ ಸ್ಪರ್ಧೆ ಸೇರಿದಂತೆ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ 60ಕ್ಕೂ ಹೆಚ್ಚು ಬಹುಮಾನ ಪಡೆದಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.