ADVERTISEMENT

ಆನೇಕಲ್| ಲಕ್ಷ್ಮಿಪುರದಲ್ಲಿ ಕಾಡಾನೆ ದಾಳಿ: ನಾಲ್ಕು ಎಕರೆ ರಾಗಿ ನಾಶ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:05 IST
Last Updated 25 ನವೆಂಬರ್ 2025, 2:05 IST
ಆನೇಕಲ್ ತಾಲ್ಲೂಕಿನ ಲಕ್ಷ್ಮಿಪುರದಲ್ಲಿ ಕಾಡಾನೆಗಳ ದಾಳಿಯಿಂದ ರಾಗಿ ಬೆಳೆ ನಾಶವಾಗಿರುವುದು
ಆನೇಕಲ್ ತಾಲ್ಲೂಕಿನ ಲಕ್ಷ್ಮಿಪುರದಲ್ಲಿ ಕಾಡಾನೆಗಳ ದಾಳಿಯಿಂದ ರಾಗಿ ಬೆಳೆ ನಾಶವಾಗಿರುವುದು   

ಆನೇಕಲ್: ತಾಲ್ಲೂಕಿನ ಲಕ್ಷ್ಮಿಪುರದಲ್ಲಿ ರಾಗಿ ಹೊಲದಲ್ಲಿ ಕಾಡಾನೆಗಳು ದಾಳಿ ನಡೆಸಿದ್ದು, ನಾಲ್ಕು ಎಕರೆ ಬೆಳೆ ನಾಶ ಆಗಿದೆ.

ಲಕ್ಷ್ಮೀಪುರದಲ್ಲಿ ಅಂದಾಜು 4ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ರಾಗಿಯ ಬೆಳೆಯನ್ನು ಸಂಪೂರ್ಣವಾಗಿ ಆನೆಗಳು ಹಾಳು ಮಾಡಿದೆ.  ಕಳೆದ ಆರೇಳು ತಿಂಗಳಿನಿಂದ ಮಗುವಿನಂತೆ ಸಾಕಿದ್ದ ರಾಗಿ ಬೆಳೆ ಒಂದೇ ರಾತ್ರಿಯಲ್ಲಿ ನೆಲಕಚ್ಚಿದೆ.

ರಾಮಾಂಜಿನಪ್ಪ, ಪುಟ್ಟರಾಜು, ಮಂಜುನಾಥ್‌ ಅವರಿಗೆ ಸೇರಿದ ರಾಗಿ ಬೆಳೆ ನಾಶಗೊಂಡಿದೆ. 

ADVERTISEMENT

‘ಕಳೆದ ಆರೇಳು ತಿಂಗಳಿನಿಂದ ಕಷ್ಟ ಪಟ್ಟು ರಾಗಿಯನ್ನು ಬೆಳೆದಿದ್ದೆವು. ₹1.5ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದೆವು. ₹2-3 ಲಕ್ಷ ಲಾಭ ಬರುವ ನಿರೀಕ್ಷೆಯಿತ್ತು. ಕಟಾವು ಹಂತದಲ್ಲಿರುವ ರಾಗಿ ಹೊಸದ ಮೇಲೆ ಕಾಡಾನೆಗಳು ದಾಳಿ ನಡೆಸಿ ಬೆಳೆ ಹಾಳು ಮಾಡಿವೆ. ಈಗ ಅರಣ್ಯ ಇಲಾಖೆ ನೀಡುವ ನಾಲ್ಕೈದು ಸಾವಿರ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಬಂದಿರುವು ದುಃಖದ ವಿಷಯ ಎಂದು ರೈತ ರಾಮಾಂಜಿನಪ್ಪ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.