ADVERTISEMENT

ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಹೆಚ್ಚಿದೆ: ಎನ್.ಕನಕರಾಜು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 2:07 IST
Last Updated 24 ಡಿಸೆಂಬರ್ 2025, 2:07 IST
ವಿಜಯಪುರ ಕಸಾಪ ಪದಾಧಿಕಾರಿಗಳು ರೈತ ನಂಜುಂಡಪ್ಪ ಅವರನ್ನು ಸನ್ಮಾನಿಸಿದರು
ವಿಜಯಪುರ ಕಸಾಪ ಪದಾಧಿಕಾರಿಗಳು ರೈತ ನಂಜುಂಡಪ್ಪ ಅವರನ್ನು ಸನ್ಮಾನಿಸಿದರು   

ವಿಜಯಪುರ (ದೇವನಹಳ್ಳಿ): ‌ಭಾರತ ಈಗಲೂ ಕೃಷಿ ಪ್ರಧಾನ ದೇಶವೇ ಆಗಿದೆ. ಕೃಷಿಯೇ ಬದುಕಿನ ಪ್ರಧಾನ ಕಸುಬು. ಇಲ್ಲಿನ ರೈತ ವರ್ಗ ದೇಶದ 140 ಕೋಟಿ ನಾಗರಿಕರಿಗೆ ಆಹಾರ ಉಣಬಡಿಸಿ ಹೊಟ್ಟೆ ತುಂಬಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಹೆಚ್ಚಿದೆ ಎಂದು ಕಸಾಪ ವಿಜಯಪುರ ನಗರ ಘಟಕದ ಅಧ್ಯಕ್ಷ ಎನ್.ಕನಕರಾಜು ತಿಳಿಸಿದರು.

ಪಟ್ಟಣದ ನಿವಾಸಿ ಚಂದೇನಹಳ್ಳಿಯ ರೈತ ನಂಜುಂಡಪ್ಪ ಅವರನ್ನು ವಿಜಯಪುರ ಕಸಾಪ ಘಟಕದ ಪದಾಧಿಕಾರಿಗಳು ಮಂಗಳವಾರ ಸನ್ಮಾನಿಸುವ ಮೂಲಕ ರೈತ ದಿನಾಚರಣೆ ಆಚರಿಸಿದರು.

ರೈತ ನಂಜುಂಡಪ್ಪ ಮಾತನಾಡಿ, ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಬೇಕಿದೆ. ಬೆಳೆ ಚೆನ್ನಾಗಿ ಬಂದರೆ ಬೆಲೆ ಇರುವುದಿಲ್ಲ, ಬೆಲೆ ಇದ್ದರೆ ಬೆಳೆ ಚೆನ್ನಾಗಿ ಬಂದಿರುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ರೈತರು ಬದುಕುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಕಸಾಪ ತಾಲ್ಲೂಕು ಉಪಾಧ್ಯಕ್ಷ ಜೆ.ಆರ್.ಮುನಿವೀರಣ್ಣ ಮಾತನಾಡಿದರು. ‌ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎನ್.ಸಿ.ಮುನಿವೆಂಕಟರಮಣ, ಕೆ.ವಿ.ಮುನಿರಾಜು, ಪಾಪರಾಜು, ಶ್ರೀನಿವಾಸ ಭಟ್ಟಾಚಾರ್ಯ, ಡಿ.ಎಂ.ಮುನೀಂದ್ರ, ಕರವೇ ಶಿವಕುಮಾರ್, ಜೆ.ಟಿ.ನಾರಾಯಣಸ್ವಾಮಿ, ಸಿರೀಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.