ADVERTISEMENT

ಲಾಕ್‌ಡೌನ್ ಗಂಗಾತಾಯಿ ಜಾತ್ರಾ ಮಹೋತ್ಸವ ರದ್ದು

​ಪ್ರಜಾವಾಣಿ ವಾರ್ತೆ
Published 21 ಮೇ 2020, 16:30 IST
Last Updated 21 ಮೇ 2020, 16:30 IST
ವಿಜಯಪುರ ಗಂಗಾತಾಯಿ ದೇವಾಲಯ
ವಿಜಯಪುರ ಗಂಗಾತಾಯಿ ದೇವಾಲಯ   

ವಿಜಯಪುರ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಆಗಿರುವ ಕಾರಣ ಪ್ರತಿ ವರ್ಷ ಮೇ ತಿಂಗಳಿನಲ್ಲಿ ಇಲ್ಲಿ ನಡೆಯುತ್ತಿದ್ದ ಗ್ರಾಮ ದೇವತೆ ಗಂಗಾತಾಯಿ ದೇವಾಲಯದ ಜಾತ್ರಾ ಮಹೋತ್ಸವ ರದ್ದುಗೊಂಡಿದ್ದು ಜನರು ತಂಬಿಟ್ಟಿನ ದೀಪಗಳನ್ನು ಮಾಡಿಕೊಂಡು ಬಂದು ಗೇಟಿನ ಬಳಿ ಬೆಳಗಿಕೊಂಡು ಹೋಗುತ್ತಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೀಪಗಳನ್ನು ಬೆಳಗುತ್ತಿದ್ದರಿಂದ ಪೊಲೀಸರು ಬಂದು ವಾಪಸ್‌ ಕಳುಹಿಸಿದರು. ಗಂಗಾತಾಯಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಕೃಷ್ಣಪ್ಪ ಮಾತನಾಡಿ, ‘ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಯಾರೋ ಕಿಡಿಗೇಡಿಗಳು ದೇವಾಲಯದಲ್ಲಿ ಜಾತ್ರೆ ಪ್ರಯುಕ್ತ ಪೂಜೆಗಳು ಪ್ರಾರಂಭವಾಗಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಕೊರೊನಾ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಸರ್ಕಾರದ ಸೂಚನೆಯಂತೆ ಊರ ಜಾತ್ರೆಯನ್ನು ಸಹ ರದ್ದುಗೊಳಿಸಿದ್ದೇವೆ. ಭಕ್ತರು ತಮ್ಮ ಮನೆಯಲ್ಲಿಯೇ ದೇವರ ಭಾವಚಿತ್ರವಿಟ್ಟುಕೊಂಡು ಪೂಜೆ ಸಲ್ಲಿಸುವ ಮೂಲಕ ದೀಪಗಳು ಬೆಳಗಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT