ADVERTISEMENT

ಗಾಂಜಾ, ಮಾದಕ ವಸ್ತು ವಶ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:07 IST
Last Updated 16 ಸೆಪ್ಟೆಂಬರ್ 2022, 4:07 IST

ವಿಜಯಪುರ(ಬೆಂ.ಗ್ರಾಮಾಂತರ): ಪಟ್ಟಣದ ಹೊರವಲಯದಲ್ಲಿರುವ ಮಂಡಿಬೆಲೆ ಬಳಿಯ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ₹50,000 ಮೌಲ್ಯದ ಗಾಂಜಾ ಹಾಗೂ ₹18,000 ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ವಿಜಯಪುರ ರಾಜೀವ್ ನಗರದ ನಿವಾಸಿ ಚೇತನ್, ಮಂಡಿಬೆಲೆ ರಸ್ತೆಯ ನಿವಾಸಿ ವಿನೋದ್, ಬೈಯಮ್ಮ ಬಡಾವಣೆಯ ವಿಜಯ್, ಮತ್ತು ಕೆರೆಕೋಡಿ ರಸ್ತೆಯ ಸುಮನ್ ಬಂಧಿತ ಆರೋಪಿಗಳು. ಇವರಿಂದ 1.87 ಕೆ.ಜಿ. ಗಾಂಜಾ, 9 ಗ್ರಾಂ ಎಂಡಿಎಂಎ ವಶ ಪಡಿಸಿಕೊಳ್ಳಲಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಆರ್. ವಿರೇಂದ್ರ ಪ್ರಸಾದ್ ತಿಳಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT