ವಿಜಯಪುರ (ದೇವನಹಳ್ಳಿ): ಸತ್ಯ, ಅಹಿಂಸೆ, ಶಾಂತಿ ಎಂಬ ಅಸ್ತ್ರ ನೀಡಿ ಸಹಬಾಳ್ವೆ ಜೀವನಕ್ಕೆ ಕರೆ ನೀಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಸರಳ ವ್ಯಕ್ತಿತ್ವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ಪಾದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಇಲ್ಲಿನ ಚೆನ್ನಕೇಶವ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಮಹನೀಯರು ಜೀವನ ಚರಿತ್ರೆ ಅರಿತುಕೊಳ್ಳಬೇಕಿದೆ. ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯ ವ್ಯಕ್ತಿತ್ವ ಹೊಂದಿದವರು ಎಂದು ತಿಳಿಸಿದರು.
ಬಮುಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಬಿ.ವಿ.ರಾಜಶೇಖರ ಗೌಡ, ತಾವರೆಕೆರೆ ರಾಜಶೇಖರ್, ಋಷಿಕುಲ ಶಾಲೆಯ ದೇವರಾಜ್, ಸುಪ್ರೀತ್, ದೊಡ್ಡತತ್ತಮಂಗಲ ನಾರಾಯಣಸ್ವಾಮಿ, ಗೋಪಾಲಗೌಡ, ನಾರಾಯಣಗೌಡ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿಯಪ್ಪ, ಅರ್ಚಕರಾದ ಮುರಳಿದರ್ ಭಟ್ಟಾಚಾರ್ಯ, ರಾಜು ಸ್ವಾಮಿ ಇದ್ದರು.
ಮೋದಿ ಮಾತಿಗೆ ತದ್ವಿರುದ್ದ: ‘ಈಗಾಗಲೇ ನಾನು ರಾಜಕೀಯ ನಿವೃತ್ತಿ ಹೊಂದಿದ್ದೇನೆ. ಈಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಇವತ್ತಿನ ವ್ಯವಸ್ಥೆ ನಾನಾ ರೀತಿ ಇದೆ. ಪ್ರಧಾನಿ ಮೋದಿ ಅವರು ರಾಜಕೀಯದಲ್ಲಿ ವಂಶಪಾರಂಪರ್ಯ ಇರಬಾರದು ಎಂದು ಹೇಳಿದ್ದಾರೆ. ಆದರೆ ಬಿಜೆಪಿಯಲ್ಲಿ ಕೆಲವರು ಅವರ ಮಾತಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಮಾಜಿ ಸಂಸದ ಬಚ್ಚೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.