ದೊಡ್ಡಬಳ್ಳಾಪುರ: ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತಲೂ ಮುಂಚಿತವಾಗಿಯೇ ಆರಂಭವಾಗಿದೆ. ಹಾಗೆಯೇ ವಾಡಿಕೆಗಿಂತ ಉತ್ತಮ ಮಳೆಯೂ ಆಗಿದೆ. ಸಂತಾನೋತ್ಪತ್ತಿ ಸಮಯವಾದ ಕಾರಣ ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು ಗಂಡು ಕಪ್ಪೆಗಳ ಸದ್ದು ಜೋರಾಗಿದೆ.
ಮಳೆ ಬೀಳುತ್ತದ್ದಂತೆ ವಿವಿಧ ಜಾತಿಯ ಕಪ್ಪೆಗಳು ಹೊರ ಬಂದಿವೆ. ಕಪ್ಪೆಗಳು ನೀರಿನಲ್ಲಷ್ಟೇ ಅಲ್ಲದೆ ಬಿಲ, ಮರ, ಪೊದೆ, ಗೋಡೆ ಹೀಗೆ ಹಲವು ವಾಸಸ್ಥಾನಗಳಲ್ಲಿ ಕಾಣುತ್ತಿವೆ.
ಸೂಕ್ಷ್ಮ ಜೀವಿಗಳಾಗಿರುವ ಕಪ್ಪೆಗಳು ಜಲ ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮೂಲಗಳ ನಾಶ, ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆ, ಹವಾಮಾನ ಬದಲಾವಣೆ, ಜಲಾಶಯ ನಿರ್ಮಾಣ, ನಗರೀಕರಣದಿಂದ ಅಳಿವಿನ ಅಂಚಿನತ್ತ ಸಾಗುತ್ತಿವೆ.
30 ವರ್ಷಗಳಲ್ಲಿ 200 ಕ್ಕೂ ಹೆಚ್ಚಿನ ಕಪ್ಪೆ ಪ್ರಭೇದಗಳು ನಶಿಸಿಹೋಗಿವೆ. ಕಪ್ಪೆಗಳು ಆಹಾರ ಸರಪಳಿಯ ಭಾಗ ಅಷ್ಟೇ ಅಲ್ಲ, ಸಂಸ್ಕೃತಿಯ ಭಾಗವೂ ಆಗಿವೆ. ಕಪ್ಪೆಗಳು ಸದ್ದು ಕಡಿಮೆಯಾದರೆ ಅದರ ಪರಿಣಾಮ ಮಾನವ ಕುಲಕ್ಕೂ ತಟ್ಟಲಿದೆ ಎನ್ನುತ್ತಾರೆ ಕೀಟ, ಜೇಡ ಸಂಶೋಧಕ ವೈ.ಟಿ.ಲೋಹಿತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.