ADVERTISEMENT

ಗುಟ್ಟೆ ಲಕ್ಷ್ಮಿನರಸಿಂಹ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:41 IST
Last Updated 4 ಮಾರ್ಚ್ 2026, 4:41 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯಲ್ಲಿ ಮಂಗಳವಾರ ಗುಟ್ಟೆ ಲಕ್ಷ್ಮಿನರಸಿಂಹ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯಲ್ಲಿ ಮಂಗಳವಾರ ಗುಟ್ಟೆ ಲಕ್ಷ್ಮಿನರಸಿಂಹ ರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಸಾಸಲು(ದೊಡ್ಡಬಳ್ಳಾಪುರ): ತಾಲ್ಲೂಕಿನ ಕಾಮೇನಹಳ್ಳಿ ಸಮೀಪದ ಗುಟ್ಟೆ ಲಕ್ಷ್ಮಿನರಸಿಂಹ ಕ್ಷೇತ್ರದಲ್ಲಿ ಮಂಗಳವಾರ ರಥೋತ್ಸವ ಹಾಗೂ ದನಗಳ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಗಂಗಾಪೂಜೆ, ಅಂಕುರಾರ್ಪಣೆ, ಧ್ವಜಸಂಕಲ್ಪ, ಸುದರ್ಶನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಕದರಿ ಹುಣ್ಣಿಮೆ ಪ್ರಯುಕ್ತ ಮಧ್ಯಾಹ್ನ 12.8ಕ್ಕೆ ರಥೋತ್ಸವ ನೆರವೇರಿತು.

ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನೆರವೇರಿಸಿ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಪಾನಕ ಸೇವೆ, ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.

ADVERTISEMENT

ದೇವಾಲಯಕ್ಕೆ ತೆರಳಲು ಭಕ್ತರು ಖಾಸಗಿ ವಾಹನ, ಆಟೊಗಳ ಮೊರೆ ಹೋಗಿದ್ದರು. ಸಂಜೆ ಪಚ್ಚಾರಲಹಳ್ಳಿ, ಕಾಮೇನಹಳ್ಳಿ, ಆರೂಢಿ, ದೊಡ್ಡಗುಂಡಪ್ಪನಾಯಕನಹಳ್ಳಿ, ಚಿಕ್ಕ ಗುಂಡಪ್ಪನಾಯಕನಹಳ್ಳಿ, ಸಿಂಗ್ರಯ್ಯನಪಾಳ್ಯ, ಕಲ್ಲಕುಂಟೆ ಗರಿಕೇನಹಳ್ಳಿ, ವಡ್ಡನಹಳ್ಳಿ ಕೊಟ್ಟಗೆಮಾಚೇನಹಳ್ಳಿ, ಬನವತಿ, ದಡಘಟ್ಟಮೊಡಗು, ಗೌಡನಕುಂಟೆ, ಕರೇಕಲ್ಲಹಳ್ಳಿ, ಹಾರೋಹಳ್ಳಿ, ಅಂಗದವೀರನಹಳ್ಳಿ, ಸೋಮಶೆಟ್ಟಿಹಳ್ಳಿ, ನಾಚಕುಂಟೆ, ತರಿದಾಳು, ನಾಗತೇನಹಳ್ಳಿ, ಇಂದಿರಾನಗರ, ಬೇವಿನಹಳ್ಳಿ, ಕುಕ್ಕಲಹಳ್ಳಿ, ಉಜ್ಜನಿ, ಸಾಸಲು ಗ್ರಾಮಗಳಿಂದ ಆಕರ್ಷಕ ದೀಪದಾರತಿ, ಪಟಾಕಿ, ಬಾಣಬಿರುಸುಗಳ ಪ್ರದರ್ಶನ ನಡೆಯಿತು.

ಮಾರ್ಚ್‌ 4 ರಂದು ಬೆಳಿಗ್ಗೆ ಜಾತ್ರಾ ಮಹೋತ್ಸವದ ಜಲಧಿ ಕಾರ್ಯಕ್ರಮ, ಬಾಳೆಮರ ಅಂಬು ಹಾಕುವ ಮೂಲಕ ಶಾಂತಿ ಸಂಪನ್ನ, ಹೋಳಿ ಹಬ್ಬದ ಪ್ರಯುಕ್ತ ಬಣ್ಣದ ಓಕುಳಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ರಾತ್ರಿ 8ಕ್ಕೆ ಗುಟ್ಟೆ ಲಕ್ಷ್ಮಿನರಸಿಂಹಸ್ವಾಮಿ ನಾಟಕ ಮಂಡಳಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

ಗುಟ್ಟೆ ಲಕ್ಷ್ಮಿನರಸಿಂಹ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.