ಪೊಲೀಸರ ವಶಕ್ಕೆ ಆರೋಪಿ
ಚಿಕ್ಕಬಳ್ಳಾಪುರ: ನಗರದ ಬಿಬಿ ರಸ್ತೆಯ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರದಿಂದ ₹2 ಲಕ್ಷ ಕಳ್ಳತನ ಮಾಡಿದ್ದ ಆರೋಪ ಮೇಲೆ ತ್ರಿಪುರ ಮೂಲದ ಬೆಂಗಳೂರು ವಾಸಿ ನಿಯಾಜ್ ಉದ್ದೀನ್ (20) ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹15 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.
ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರದ ಬಾಗಿಲಿಗೆ ಆರೋಪಿ ಸಾಧನವೊಂದನ್ನು ಅಳವಡಿಸಿದ್ದ. ಗ್ರಾಹಕರು ಹಣವನ್ನು ಡ್ರಾ ಮಾಡಿದರೂ ಹಣ ಯಂತ್ರದಿಂದ ಹೊರಗೆ ಬರುತ್ತಿರಲಿಲ್ಲ. ಗ್ರಾಹಕರು ಸ್ಥಳದಿಂದ ತೆರಳಿದ ನಂತರ ಆ ಹಣವನ್ನು ಪಡೆಯುತ್ತಿದ್ದ. ಹೀಗೆ ಒಟ್ಟು ₹2 ಲಕ್ಷ ಕಳ್ಳತನ ಮಾಡಿದ್ದ. ಈ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿ ಪತ್ತೆಗೆ ಪೊಲೀಸರು ತಂಡ ರಚಿಸಿದ್ದರು. ನಿಯಾಜ್ ಉದ್ದೀನ್ ತ್ರಿಪುರ ರಾಜ್ಯದವನಾಗಿದ್ದು ಬೆಂಗಳೂರಿನ ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.