ADVERTISEMENT

ಕಾರು– ಸರಕು ಸಾಗಣೆ ವಾಹನ ನಡುವೆ ಡಿಕ್ಕಿ: ಮೂವರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:08 IST
Last Updated 2 ಮಾರ್ಚ್ 2026, 5:08 IST
ದೊಡ್ಡಗಟ್ಟಿಗನಬ್ಬೆಗೇಟ್ ಸಮೀಪ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಹೊಸಕೋಟೆ ಮತ್ತು ತಿರುಮಶೆಟ್ಟಿಹಳ್ಳಿ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರಿನ ಒಂದು ಬದಿ ಜಕಂಗೊಂಡಿರುವುದು
ದೊಡ್ಡಗಟ್ಟಿಗನಬ್ಬೆಗೇಟ್ ಸಮೀಪ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಹೊಸಕೋಟೆ ಮತ್ತು ತಿರುಮಶೆಟ್ಟಿಹಳ್ಳಿ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರಿನ ಒಂದು ಬದಿ ಜಕಂಗೊಂಡಿರುವುದು   

ದೊಡ್ಡಗಟ್ಟಿಗನಬ್ಬೆ(ಹೊಸಕೋಟೆ): ಇಲ್ಲಿನ ಗೇಟ್ ಸಮೀಪ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಹೊಸಕೋಟೆ ಮತ್ತು ತಿರುಮಶೆಟ್ಟಿಹಳ್ಳಿ ರಸ್ತೆಯಲ್ಲಿ ಕಾರು ಮತ್ತು ಸರಕು ಸಾಗಣೆ ವಾಹನ ನಡುವೆ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತಲ್ಲಿ ಸರಕು ಸಾಗಣೆ ವಾಹನ ಚಾಲಕನ ಬಲಗೈ ಮುರಿದಿದ್ದು, ಉಳಿದ ಇಬ್ಬರಿಗೆ ತಲೆ ಭಾಗಕ್ಕೆ ತೀವ್ರವಾಗಿದೆ ಗಾಯವಾಗಿದೆ. ಗಾಯಾಳುಗಳನ್ನು ಹೊಸಕೋಟೆಯ ಸಿಲಿಕಾನ್‌ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಅಪಾಯದಿಂದ ಪಾರಾಗಿದ್ದಾರೆ.

ಡಿಕ್ಕಿ ರಭಸಕ್ಕೆ ವಾಹನದ ಮುಂಭಾಗ ಜಖಂಗೊಂಡಿದೆ. ಕಾರಿನ ಒಂದು ಬದಿ ನಜ್ಜುಗುಜ್ಜಾಗಿದೆ.  ಹೊಸಕೋಟೆ ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT
ದೊಡ್ಡಗಟ್ಟಿಗನಬ್ಬೆಗೇಟ್ ಸಮೀಪ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಹೊಸಕೋಟೆ ಮತ್ತು ತಿರುಮಶೆಟ್ಟಿಹಳ್ಳಿ ರಸ್ತೆಯಲ್ಲಿ ಅಪಘಾತಕ್ಕಿಡಾದ ಟಾಟಾ ಎಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.