ಹೊಸಕೋಟೆ: ತಾಲ್ಲೂಕಿನ ತಾವರೆಕೆರೆ ಗ್ರಾಮದ ಎಸ್.ಎನ್, ಐಟಿಐ ಕಾಲೇಜಿನಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದಿಂದ ಪತ್ರಿಕಾ ವಿತರಕರ ದಿನಾಚರಣೆ ನಡೆಯಿತು.
ನಂದುಗುಡಿಯ ಉಪತಶೀಲ್ದಾರ್ ಬಿ.ಸಿ.ಮಂಜುನಾಥ್, ಸೂರ್ಯ ಉದಯಿಸುವ ಮೊದಲೇ, ಮುಂಜಾನೆಯ ಬಿಸಿ ಬಿಸಿ ಚಹಾ ಸೇವಿಸುವ ಮುನ್ನವೇ ಓದುಗರಿಗೆ ದಿನಪತ್ರಿಕೆ ತಲುಪಿಸಬೇಕು. ಇದು ಸುಲಭದ ಕೆಲಸವಲ್ಲದಿದ್ದರೂ, ಪತ್ರಿಕೆ ಮುಟ್ಟಿಸುವ ಕಾಯಕವನ್ನು ಚಾಚೂ ತಪ್ಪದೆ ಪತ್ರಿಕಾ ವಿತರಕರು ಮಾಡುತ್ತಿದ್ದಾರೆ ಎಂದು ಹೇಳಿದರು.
ಇಬ್ಬನಿಯ ಹನಿ ಇನ್ನೂ ನಿಲ್ಲದ ಹೊತ್ತಿನ ಚುಮು ಚುಮು ಚಳಿ, ಮಳೆ–ಗಾಳಿ, ಬೀದಿ ನಾಯಿಗಳ ಹಾವಳಿ ಸೇರಿದಂತೆ ಹಲವು ಸವಾಲು ಮೆಟ್ಟಿ ಪತ್ರಿಕೆ ತಲುಪಿಸುವ ವಿತರಕರು, ನಮ್ಮ ನಡುವಣ ಕಾಯಕಯೋಗಿಗಳು. ಓದುಗರು ಹಾಗೂ ಸುದ್ದಿಮನೆಯ ಕೊಂಡಿಯಾಗಿ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರ ಕೆಲಸವನ್ನು ಸ್ಮರಿಸುವ ‘ಪತ್ರಿಕಾ ವಿತರಕರ ದಿನ’ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಖುಷಿ ತಂದಿದೆ ಎಂದು ತಿಳಿಸಿದರು
ತಾವರೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ .ಪ್ರಿಯಾಂಕಾ ರಮೇಶ್ ಮಾತನಾಡಿದರು.
ತಾವರೆಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ. ಅಶ್ವಿನಿ ದೇವರಾಜ್, ನಂದಗುಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಸತ್ಯಣ್ಣ, ಎನ್. ರಾಮೇಗೌಡ, ಎಂ.ಎನ್.ಆರ್. ನಟರಾಜ್, ರಾಕೇಶ್, ನರಸಿಂಹಮೂರ್ತಿ, ವಿಮಲ, ಮೈಕಲ್, ಸಂಗೀತ ಸುಮಾ , ಜ್ಯೋತಿಶಿರಪ್ಪ, ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.