ADVERTISEMENT

ಹೊಸಕೋಟೆ | ಕರ್ನಾಟಕ ನವೋದ್ಯಮಗಳ ಪ್ರಶಸ್ತ ತಾಣ: ಡೆನ್ಮಾರ್ಕ್‌ನಲ್ಲಿ ಶಾಸಕ ಶರತ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:19 IST
Last Updated 29 ಆಗಸ್ಟ್ 2025, 5:19 IST
ಡೆನ್ಮಾರ್ಕ್‌ ದೇಶದ ರಾಜಧಾನಿ ಕೋಪನ್‌ಹೇಗನ್‌ ನಗರದ ಬೆಲ್ಲಾ ಸೆಂಟರ್‌ನಲ್ಲಿ "ಕರ್ನಾಟಕ ಪೆವಿಲಿಯನ್ ಡ್ರೈವಿಂಗ್ ಗ್ಲೋಬಲ್ ಇನೋವೇಷನ್"‌ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೆಗೌಡ ಪಾಲ್ಗೊಂಡಿದ್ದ ಸಂದರ್ಭ
ಡೆನ್ಮಾರ್ಕ್‌ ದೇಶದ ರಾಜಧಾನಿ ಕೋಪನ್‌ಹೇಗನ್‌ ನಗರದ ಬೆಲ್ಲಾ ಸೆಂಟರ್‌ನಲ್ಲಿ "ಕರ್ನಾಟಕ ಪೆವಿಲಿಯನ್ ಡ್ರೈವಿಂಗ್ ಗ್ಲೋಬಲ್ ಇನೋವೇಷನ್"‌ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೆಗೌಡ ಪಾಲ್ಗೊಂಡಿದ್ದ ಸಂದರ್ಭ   

ಹೊಸಕೋಟೆ: ಡೆನ್ಮಾರ್ಕ್‌ ರಾಜಧಾನಿ ಕೋಪನ್‌ ಹೇಗನ್‌ ನಗರದ ಬೆಲ್ಲಾ ಸೆಂಟರ್‌ನಲ್ಲಿ ‘ಕರ್ನಾಟಕ ಪೆವಿಲಿಯನ್ ಡ್ರೈವಿಂಗ್ ಗ್ಲೋಬಲ್ ಇನೋವೇಷನ್’ ಕಾರ್ಯಕ್ರಮವನ್ನು ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

ಕರ್ನಾಟಕದಲ್ಲಿಯ ನವೋದ್ಯಮಗಳಿಗಿರುವ ಉತ್ತೇಜ, ಪೂರಕ ವಾತಾವರಣ ಕುರಿತು ಜಾಗತಿಕ ನಾಯಕರೊಂದಿಗೆ ಮಾಹಿತಿ ಹಂಚಿಕೊಂಡರು.ಕರ್ನಾಟಕ ತಂತ್ರಜ್ಞಾನ ಹಾಗೂ ಅವಕಾಶ ಸೃಷ್ಟಿಯ ಕೇಂದ್ರವಾಗಿದೆ ಎಂದು ಮನವರಿಕೆ ಮಾಡಿದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಲ್ಲಿನ ಆರೋಗ್ಯ ಸೇವೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡುವ ಕುರಿತು ಹೆಲ್ತ್‌ಕೇರ್‌ ಡೆನ್ಮಾರ್ಕ್‌ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ADVERTISEMENT

ಡೆನ್ಮಾರ್ಕ್‌ನ ಅತ್ಯಾಧುನಿಕ ಹಾಗೂ ರೋಗಿ ಕೇಂದ್ರಿತ ಆರೋಗ್ಯ ರಕ್ಷಣಾ ವ್ಯವಸ್ಥೆ ಹಾಗೂ ಬಲಿಷ್ಠವಾದ ಡಿಜಿಟಲ್‌ ಮೂಲಸೌಕರ್ಯವು ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ನೆರವಾಗಲಿದೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದರು.

ಬಾಹ್ಯಾಕಾಶ ತಂತ್ರಜ್ಞಾನ ಆಧಾರಿತ ನವೋದ್ಯಮಗಳನ್ನು ಪ್ರೋತ್ಸಾಹಿಸಲು ಪ್ರಮುಖ ಬಾಹ್ಯಾಕಾಶ ಕೇಂದ್ರಿತ ಡೆನ್ಮಾರ್ಕ್‌ ಸಂಸ್ಥೆ ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ಬ್ಯುಸಿನೆಸ್‌ ಇನ್‌ಕ್ಯುಬೇಷನ್‌ ಸೆಂಟರ್‌ ಅಧಿಕಾರಿಗಳೊಂದಿಗೆ ಚರ್ಚಿಸಿದರು. 

ಕೋಪನ್‌ಹೇಗನ್‌ ನಗರದ ಬೆಲ್ಲಾ ಸೆಂಟರ್‌ನಲ್ಲಿ "ಕರ್ನಾಟಕ ಪೆವಿಲಿಯನ್ ಡ್ರೈವಿಂಗ್ ಗ್ಲೋಬಲ್ ಇನೋವೇಷನ್"‌ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೆಗೌಡ ಡ್ಯಾನಿಶ್‌ ಲೈಫ್‌ ಸೈನ್ಸ್‌ ಕ್ಲಸ್ಟರ್‌ ಸಂಸ್ಥೆಯ ಅಧಿಕಾರಿಗಳೊಂದಿಗೆ ಪಾಲ್ಗೊಂಡಿದ್ದ ಸಂದರ್ಭ

ಡೆನ್ಮಾರ್ಕ್‌ ದೇಶದ ರಾಜಧಾನಿ ಕೋಪನ್‌ಹೇಗನ್‌ ನಗರದ ಬೆಲ್ಲಾ ಸೆಂಟರ್‌ನಲ್ಲಿ "ಕರ್ನಾಟಕ ಪೆವಿಲಿಯನ್ ಡ್ರೈವಿಂಗ್ ಗ್ಲೋಬಲ್ ಇನೋವೇಷನ್"‌ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೆಗೌಡ ಹೆಲ್ತ್‌ಕೇರ್‌ ಡೆನ್ಮಾರ್ಕ್‌ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.