ADVERTISEMENT

ಹೊಸಕೋಟೆ: ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 16:05 IST
Last Updated 24 ಏಪ್ರಿಲ್ 2025, 16:05 IST
ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು
ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು   

ಹೊಸಕೋಟೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಹಿಸಿಟಿ ಮತ್ತು ಸಿನಿಯರ್ಸ್ ಪಾರ್ ಚೇಂಜ್ ವತಿಯಿಂದ ನಿರ್ಮಿಸಲಾದ ಸುಮಾರು ₹25 ಲಕ್ಷ ಮೌಲ್ಯದ ಕಂಪ್ಯೂಟರ್ ಲ್ಯಾಬ್ ಅನ್ನು ಗುರುವಾರ ಶಾಸಕ ಶರತ್‌ ಬಚ್ಚೇಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲಾ–ಕಾಲೇಜಿನಲ್ಲಿ ಓದುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ದಾನಿಗಳು ನೆರವಿನ ಹಸ್ತ ಚಾಚಬೇಕಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಇಲದೆ ಶಿಕ್ಷಣ ಪರಿಪೂರ್ಣವಾಗುವುದಿಲ್ಲ. ಈ ದೆಸೆಯಲ್ಲಿ ಕೊಹಿಸಿಟಿ ಮತ್ತು ಸಿನಿಯರ್ಸ್ ಪಾರ್ ಚೇಂಜ್ ವತಿಯಿಂದ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಆಗಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಕ್ಕಳ ಅನುಕೂಲಕ್ಕಾಗಿ 500 ಆಸನ ವ್ಯವಸ್ಥೆ ಒಳಗೊಂಡ ಸುಸಜ್ಜಿತ ಸಭಾಂಗಣ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

ADVERTISEMENT

ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ.ಬೇಗೂರು, ‘ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್‌ಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ. ಅದಕ್ಕಾಗಿ ವೃತ್ತಿ ಮಾರ್ಗದರ್ಶನ, ಕಲಿಕೆ ಜೊತೆ ಕೌಶಲ್ಯ, ಜಾಬ್ ರೆಡಿನೆಸ್ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಇದಕ್ಕಾಗಿ ವೃತ್ತಿಪರ ತರಬೇತಿ ಮತ್ತು ಕಂಪ್ಯೂಟರ್ ಕೌಶಲ ಕಲಿಸಲು ಕಂಪ್ಯೂಟರ್ ಲ್ಯಾಬ್‌ ಅವಶ್ಯಕತೆ ಇತ್ತು. ದಾನಿಗಳು ಸುಮಾರು ₹25 ವೆಚ್ಚದಲ್ಲಿ  ಕಂಪ್ಯೂಟರ್ ಕೊಡುಗೆ ನೀಡಿದ್ದಾರೆ’ ಎಂದು ತಿಳಿಸಿದರು.

ಸಿನಿಯರ್ಸ್ ಪಾರ್ ಚೇಂಜ್ ಸಂಘಟನೆಯ ಅಧ್ಯಕ್ಷ ಡಾ.ಅತುಲ್ ಸಿನ್ಹಾ, ‘ಇಂದಿನ ಯುಗದಲ್ಲಿ ತಂತ್ರಜ್ಞಾನ ಪರಿಚಯ ಇಲ್ಲದ ಶಿಕ್ಷಣ ಶಿಕ್ಷಣ ಎನಿಸಿಕೊಳ್ಳಲಾರದು. ಹೀಗಾಗಿ ಇಂದು ಸರ್ಕಾರಿ ಕಾಲೇಜುಗಳ ಮಕ್ಕಳಿಗೆ ತಂತ್ರಜ್ಞಾನ ಮತ್ತು ಸುಧಾರಿತ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ  ಕಂಪ್ಯೂಟರ್‌ ಲ್ಯಾಬ್‌ ನಿರ್ಮಾಣ ಮಾಡಿದ್ದೇವೆ’ ಎಂದು ತಿಳಿಸಿದರು.

ಸೀನಿಯರ್ಸ್ ಪಾರ್ ಸಂಘಟನೆಯ ಕಾರ್ಯದರ್ಶಿ ಪ್ರದೀಪ್ ಶ್ರೀವಾತ್ಸವ್, ನಿರ್ದೇಶಕ ಸಂಜಯ್ ಶರ್ಮಾ, ಗುರ್ಜನ್ ಮೊಹಂಕಾ, ಏಕ್ತಾ ಶ್ರೀವಾತ್ಸವ್, ಅವಿನಾಶ್ ಅಗರ್ವಾಲ್, ಕಂಪ್ಯೂಟರ್ ಲ್ಯಾಬ್‌ಗೆ ಆರ್ಥಿಕ ನೆರವು ನೀಡಿದ ಕೊಹಿಸಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ನಿರ್ದೇಶಕ ಕ್ರಿಷ್ಣನ್ ನಾರಾಯಣಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಎಚ್.ಎಂ.ಸುಬ್ಬರಾಜು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸುರೇಶ್ ಇದ್ದರು.

ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಹಿಸಿಟಿ ಮತ್ತು ಸಿನಿಯರ್ಸ್ ಪಾರ್ ಚೇಂಜ್ ವತಿಯಿಂದ ನಿರ್ಮಿಸಲಾದ  ಕಂಪ್ಯೂಟರ್ ಲ್ಯಾಬ್ ಅನ್ನು ಗುರುವಾರ ಶಾಸಕ ಶರತ್‌ ಬಚ್ಚೇಗೌಡ ಉದ್ಘಾಟಿಸಿದರು
ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದ ಗಣ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.