ತೂಬಗೆರೆ(ದೊಡ್ಡಬಳ್ಳಾಪುರ): ತಾಲ್ಲೂಕಿನ ಘಾಟಿಸುಬ್ರಹ್ಮಣ್ಯ ದೇವಾಲಯದಲ್ಲಿ ಶನಿವಾರ ನಡೆದ ಹುಂಡಿ ಕಾಣಿಕೆ ಎಣಿಕೆಯಲ್ಲಿ ₹59 ಲಕ್ಷ ಹಣ ಸಂಗ್ರಹವಾಗಿದೆ.
ಹುಂಡಿಯಲ್ಲಿ ಕಾಣಿಕೆ ಹಣದೊಂದಿಗೆ ₹63 ಸಾವಿರ ಮೌಲ್ಯದ 1 ಕೆಜಿ 400 ಗ್ರಾಂ ಬೆಳ್ಳಿ, ₹1.57 ಮೌಲ್ಯದ 19 ಗ್ರಾ. 500 ಮಿಲಿ ತೂಕದ ಚಿನ್ನ ಸಂಗ್ರಹವಾಗಿದೆ. ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ, ಪ್ರಧಾನ ಅರ್ಚಕ ಶ್ರಿನಿಧಿ, ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಜೆ.ಎನ್.ರಂಗಪ್ಪ, ಕೆ.ಎಸ್.ರವಿ, ಲಕ್ಷ್ಮನಾಯಕ್, ಆರ್.ವಿ. ಮಹೇಶ್ ಕುಮಾರ್, ಹೇಮಲತಾ ರಮೇಶ್ ಹಾಗೂ ಇಂಡಿಯನ್ ಓವರ್ಸ್ ಬ್ಯಾಂಕ್ ಸಿಬ್ಬಂದಿ ಪೊಲೀಸ್ ಇಲಾಖೆ, ದೇವಾಲಯದ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.