ADVERTISEMENT

ಹೊಸಕೋಟೆ: 100 ಕೆ.ಜಿ.ಯಷ್ಟು ಪ್ಲಾಸ್ಟಿಕ್ ವಶ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 2:15 IST
Last Updated 31 ಅಕ್ಟೋಬರ್ 2025, 2:15 IST
ನಗರಸಭೆಯಿಂದ ವಶಕ್ಕೆ ಪಡೆದ 100 ಕೆ.ಜಿ ಪ್ಲಾಸ್ಟಿಕ್
ನಗರಸಭೆಯಿಂದ ವಶಕ್ಕೆ ಪಡೆದ 100 ಕೆ.ಜಿ ಪ್ಲಾಸ್ಟಿಕ್   

ಹೊಸಕೋಟೆ: ನಗರದ ಜುಮ್ಮಾ ಮಸೀದಿ ಬಳಿಯ ಉಸ್ಮಾನ್ ಸಾಹೇಬ್ ಕಟ್ಟಡದಲ್ಲಿ ದೇಸಾಯಿ ಗೋವಿಂದರಾಜ್ ಅವರ ಪೂರ್ಣಿಮಾ ಮಾರ್ಕೆಟಿಂಗ್ ಎಂಬ ಮಳಿಗೆಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 100 ಕೆ.ಜಿ. ಪ್ಲಾಸ್ಟಿಕ್ ಅನ್ನು ನಗರಸಭೆ ಆಯುಕ್ತ ನೀಲಲೋಚನ ಪ್ರಭು ನೇತೃತ್ವ ತಂಡ ಬುಧವಾರ ರಾತ್ರಿ ವಶಪಡಿಸಿಕೊಂಡಿದೆ.

ನಗರದ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ನಿಷಿದ್ಧ.  ಆದರೂ ಈ ವ್ಯಾಪಾರಿ ರಾತ್ರಿ ವೇಳೆ ಅಂಗಡಿಗಳಿಗೆ ದ್ವಿಚಕ್ರ ವಾಹನ ಮೂಲಕ ಸರಬರಾಜು ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. ಎಲ್ಲಿಂದ ಪ್ಲಾಸ್ಟಿಕ್ ತರಲಾಗುತ್ತಿತು ಎಂದು ತಿಳಿಸಿಲ್ಲ. ಹೀಗಾಗಿ ತನಿಖೆಗಾಗಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT