ADVERTISEMENT

ಜಿಗಣಿ ಪುರಸಭೆ ಬಿಜೆಪಿ ಮಡಿಲಿಗೆ: ಮಮತಾ ಅಧ್ಯಕ್ಷೆ, ನಾಗೇಶ್‌ ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 4:51 IST
Last Updated 10 ನವೆಂಬರ್ 2020, 4:51 IST
ಜಿಗಣಿ ಪುರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಮಮತಾ ಮತ್ತು ಆರ್‌.ನಾಗೇಶ್ ಅವರನ್ನು ಮುಖಂಡರು ಅಭಿನಂದಿಸಿದರು
ಜಿಗಣಿ ಪುರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಮಮತಾ ಮತ್ತು ಆರ್‌.ನಾಗೇಶ್ ಅವರನ್ನು ಮುಖಂಡರು ಅಭಿನಂದಿಸಿದರು   

ಆನೇಕಲ್: ತಾಲ್ಲೂಕಿನ ಜಿಗಣಿ ಪುರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಮಮತಾ ಮತ್ತು ಆರ್‌.ನಾಗೇಶ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಗಣಿ ಪುರಸಭೆಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮಮತಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆರ್‌.ನಾಗೇಶ್‌ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹ
ಶೀಲ್ದಾರ್‌ ಸಿ.ಮಹಾದೇವಯ್ಯ ತಿಳಿಸಿದ್ದಾರೆ.

ಜಿಗಣಿ ಪುರಸಭೆ 23ವಾರ್ಡ್‌ಗಳಲ್ಲಿ 15 ಬಿಜೆಪಿ, 5 ಕಾಂಗ್ರೆಸ್‌, 2 ಜೆಡಿಎಸ್‌ ಮತ್ತು 1 ಪಕ್ಷೇತರ ಸದಸ್ಯರಿದ್ದಾರೆ.ನೂತನ ಅಧ್ಯಕ್ಷೆ ಮಮತಾ ಮಾತನಾಡಿ,‘ಕೈಗಾರಿಕಾ ಪ್ರದೇಶವಾಗಿರುವ ಜಿಗಣಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ತಯಾರಿಸಲಾಗುವುದು. ಎಲ್ಲ ಸದಸ್ಯರ ವಿಶ್ವಾಸ ಪಡೆದು ಸ್ವಚ್ಛ ಮತ್ತು ಸುಂದರ ಜಿಗಣಿ ಮಾಡಲು ಶ್ರಮಿಸಲಾಗುವುದು. ಜಿಗಣಿ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು’ ಎಂದು
ಹೇಳಿದರು.

ADVERTISEMENT

ಬಿಜೆಪಿ ಮಂಡಲ ಅಧ್ಯಕ್ಷ ರಾಜಶೇಖರರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟೇಶ್‌ಗೌಡ, ಪುರಸಭಾ ಸದಸ್ಯರಾದ ಹರೀಶ್‌ರೆಡ್ಡಿ, ಶಿವರಾಜು, ಶಾಂತಕುಮಾರ್, ಪವಿತ್ರಾ ಬಾಬು, ಮಲ್ಲಿಗೆ ಆನಂದ್, ಕೃಷ್ಣಮ್ಮ ಮರಿಸ್ವಾಮಿ, ತುಳಸಮ್ಮ ತಿಪ್ಪಯ್ಯ, ಕೆ.ಸಿ.ಕುಮಾರ್‌, ಶಾಂತಕುಮಾರ್‌, ಮುಖಂಡರಾದ ಪ್ರಸಾದ್‌ ರೆಡ್ಡಿ, ಮೆಡಿಕಲ್‌ ಬಾಬು, ಗಿರೀಶ್‌, ನಾಗರಾಜು, ಪ್ರವೀಣ್‌, ಸುರೇಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.