ADVERTISEMENT

ಬೆಂ. ಗ್ರಾಮಾಂತರ: ಮಧ್ಯ ಏಷ್ಯಾದಲ್ಲಿ ಸಿಲುಕಿರುವವರ ಸಂಪರ್ಕಿಸಲು ಸಹಾಯವಾಣಿ ಆರಂಭ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:01 IST
Last Updated 2 ಮಾರ್ಚ್ 2026, 5:01 IST
...
...   

ದೇವನಹಳ್ಳಿ: ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ಸಾವು–ನೋವು ಸಂಭವಿಸಿರುವ ವರದಿಗಳು ಲಭ್ಯವಾಗಿವೆ. ಈ ದೇಶಗಳಲ್ಲಿ ಕರ್ನಾಟಕ ರಾಜ್ಯದ ಹಲವರು ಸಿಲುಕಿಕೊಂಡಿರುವ ಮಾಹಿತಿ ಕೂಡ ಲಭ್ಯವಾಗಿದೆ.

ಜಿಲ್ಲೆಯವರು ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿದ್ದರೆ ತಕ್ಷಣ ಸಂಬಂಧಿತ ದೇಶಗಳ ಕಂಟ್ರೋಲ್ ರೂಂ ಸಂಖ್ಯೆಗಳಿಗೆ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಸಂಪರ್ಕಿಸಲು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲಾ ಕಚೇರಿಯ ವಿಪತ್ತು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ: 080-28388005 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಯುದ್ಧಪೀಡಿತ ಪ್ರದೇಶಗಳಲ್ಲಿ ಇರುವ ಜಿಲ್ಲೆಯ ನಾಗರಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲು ಈ ಮಾಹಿತಿ ಸಹಾಯಕವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಂಪರ್ಕ ಸಂಖ್ಯೆ

ಕತಾರ್: 00974-55647502

ಬಹ್ರೇನ್: 00973-39418071

ಜೋರ್ಡಾನ್: 00962-770 422 276

ಓಮನ್: ಟೋಲ್ ಫ್ರೀ – 8007 1234 | ವಾಟ್ಸ್‌ಆಪ್‌– +968 9828 2270

ಇರಾಕ್: +964 771 651 1185 (ಇಂಗ್ಲಿಷ್ ಮತ್ತು ಹಿಂದಿ), +964 770 444 4899 (ಅರೇಬಿಕ್)

ಕುವೈತ್: +965 65501946

ಪ್ಯಾಲೆಸ್ಟೈನ್: +970 592916418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.