
ಎಐ ಚಿತ್ರ
ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೂಲ್ಯ ವಜ್ರಾಭರಣ ಮತ್ತು ಚಿನ್ನ ಇರುವ ಲಗೇಜ್ ಕಳವು ಆಗಿದೆ. ಈ ಕುರಿತು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೆರಿಕಕ್ಕೆ ಪ್ರಯಾಣಿಸಲು ಕಳೆದ ಡಿಸೆಂಬರ್‌ನಲ್ಲಿ ಹುಬ್ಬಳ್ಳಿಯ ಶಾಂತ ಎಂಬುವವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇಲ್ಲಿಂದ ಅಬುದಾಬಿ ಮಾರ್ಗವಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಲಗೇಜ್ ಚೆಕ್–ಇನ್ ಮಾಡಿವಾಗ ಇಲ್ಲಿರುವ ನಿಯಮಗಳಂತೆ ಎಲ್ಲಾ ರೀತಿಯಲ್ಲಿಯೂ ಪರಿಶೀಲನೆ ಮಾಡಿಕೊಂಡು ಬ್ಯಾಗ್‌ಗೆ ಮುದ್ರೆ ಹಾಖಿದ ನಂತರೇ ಕ್ಲಿಯರೆನ್ಸ್ ಪಡೆದು ವಿಮಾನ ಹತ್ತಿದ್ದರು. ಆದರೆ ಅಬುದಾಬಿಯಲ್ಲಿ ಲಗೇಜ್ ಸ್ವೀಕರಿಸಲು ತೆರಳಿದಾಗ, ಒಡವೆಗಳಿದ್ದ ಬ್ಯಾಗ್ ಕಾಣೆಯಾಗಿರುವುದು ತಿಳಿದುಬಂದಿದೆ.
ಕಾಣೆಯಾದ ಲಗೇಜ್‌ನಲ್ಲಿ ಸುಮಾರು 790 ಗ್ರಾಂ ಚಿನ್ನ, ₹8 ಲಕ್ಷ ಮೌಲ್ಯದ ವಜ್ರಾಭರಣ ಹಾಗೂ ಸುಮಾರು ₹20 ಸಾವಿರ ಮೌಲ್ಯದ ಔಷಧಿಗಳು ಇದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆ ಸಂಬಂಧ ಮಹಿಳೆಯೂ ಬೆಂಗಳೂರಿಗೆ ಮರಳಿದ ನಂತರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಲಗೇಜ್ ಹ್ಯಾಂಡ್ಲಿಂಗ್ ಪ್ರಕ್ರಿಯೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.