
ಸರ್ಜಾಪುರ (ಆನೇಕಲ್): ಸರ್ಜಾಪುರದ ಕೋದಂಡರಾಮ ರಥೋತ್ಸವ ವೈಭವದಿಂದ ಮಂಗಳವಾರ ನಡೆಯಿತು.
ಕರ್ನಾಟಕ ಮತ್ತು ತಮಿಳುನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ಹೆಚ್ಚಿಸಿದವು.
ಮಂಗಳವಾರ ಮಧ್ಯಾಹ್ನ ಅಲಂಕೃತ ರಥದಲ್ಲಿ ಕಲ್ಯಾಣ ಕೋದಂಡ ಉತ್ಸವ ಮೂರ್ತಿಯನ್ನು ಕುಳ್ಳಿರಿಸಲಾಯಿತು. ಅರ್ಚಕರು ವಿವಿಧ ಧಾರ್ಮಿಕ ಪೂಜೆಗಳನ್ನು ಸಲ್ಲಿಸಿದ ನಂತರ ಭಕ್ತರು ರಥವನ್ನು ಎಳೆದರು.
ಶೇಷವಾಹನೋತ್ಸವ, ಗಜ ವಾಹನೋತ್ಸವ, ಗಜೇಂದ್ರ ಮೋಕ್ಷೋತ್ಸವ, ಕಲ್ಯಾಣೋತ್ಸವ ಏರ್ಪಡಿಸಲಾಗಿತ್ತು. ರಥವು ಸರ್ಜಾಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವೀರಗಾಸೆ, ಗಾರುಡಿ ಗೊಂಬೆ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ರಥೋತ್ಸವದಲ್ಲಿ ಪಾಲ್ಗೊಂಡಿತ್ತು.
ಡಾ.ಬಿ.ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ಶನಿದೇವರ ಕೃಪಾ ಪೋಷಿತ ನಾಟಕ ಮಂಡಳಿಯಿಂದ ದಾನವೀರ ಶೂರ ಕರ್ಣ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಮುತ್ಯಾಲಮ್ಮ ದೇವಿ ಕರಗ ಮಹೋತ್ಸವವು ವಹ್ನಿಕುಲದವರಿಂದ ನಡೆಯಿತು. ಅನ್ನದಾಸೋಹ ಕೇಂದ್ರ ಸ್ಥಾಪಿಸಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಆರ್.ಮನೋಹರ್, ಸರ್ಜಾಪುರ ಸಿ.ಮುನಿರಾಜು, ಎಸ್.ವೈ ಅನಿಲ್ ರೆಡ್ಡಿ, ಶ್ಯಾಮಣ್ಣ ರೆಡ್ಡಿ, ಶಾಂತಕುಮಾರ್, ಗಣೇಶ್, ಟಿ.ವಿ.ಬಾಬು, ಸರ್ಜಾಪುರ ಶಂಭಯ್ಯ, ಶ್ರೀರಾಮುಲು, ಶ್ರೀನಿವಾಸ್, ಅರವಿಂದ್ ರೆಡ್ಡಿ, ನಾಗರಾಜು, ಭರತ್ ಗೌಡ, ಪ್ರಭು, ಬುಲೆಟ್ ಬಾಬು, ಗೋಪಾಲ್, ಕಲಾವತಿ ಮೂರ್ತಿ ಕುಮಾರ್, ಸತೀಶ್, ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.