ADVERTISEMENT

ಆನೇಕಲ್ : ರಾಮನಾಯಕನಹಳ್ಳಿ ಕೆರೆಯಲ್ಲಿ ಚಿರತೆ ಹೆಜ್ಜೆ ಗುರುತು

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:50 IST
Last Updated 9 ಮೇ 2020, 9:50 IST
ಆನೇಕಲ್ ತಾಲ್ಲೂಕಿನ ರಾಮನಾಯಕನಹಳ್ಳಿ ಕೆರೆಯ ಬಳಿ ಚಿರತೆ ಹೆಜ್ಜೆಗುರುತುಗಳು ಕಂಡು ಬಂದಿರುವುದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲಿಸಿದರು
ಆನೇಕಲ್ ತಾಲ್ಲೂಕಿನ ರಾಮನಾಯಕನಹಳ್ಳಿ ಕೆರೆಯ ಬಳಿ ಚಿರತೆ ಹೆಜ್ಜೆಗುರುತುಗಳು ಕಂಡು ಬಂದಿರುವುದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲಿಸಿದರು   

ಆನೇಕಲ್: ತಾಲ್ಲೂಕಿನ ನೆರಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಾಯಕನಹಳ್ಳಿ ಕೆರೆಯ ಬಳಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕ ಉಂಟು ಮಾಡಿದೆ.

ಎರಡು ದಿನಗಳ ಹಿಂದೆ ನೆರಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ರಗುಪ್ಪೆ ಬಳಿ ಹೆಜ್ಜೆ ಗುರುತು ಪತ್ತೆಯಾಗಿತ್ತು. ಶುಕ್ರವಾರ ರಾಮನಾಯಕನಹಳ್ಳಿ ಬಳಿ ಚಿರತೆಯ ಹೆಜ್ಜೆಗುರುತುಗಳು ಕಂಡು ಬಂದಿದ್ದು ಚಿರತೆಯು ಈ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ರಾತ್ರಿ ಸಂಚರಿಸುವ ಚಿರತೆಯು ಜಿಂಕೆ ಮರಿಗಳ ಬೇಟೆಗಾಗಿ ಬಂದಿರುವ ಸಾಧ್ಯತೆಗಳಿವೆ. ಆದರೆ ಪ್ರತ್ಯಕ್ಷ ದರ್ಶಿಗಳು ಯಾರೂ ಕಂಡಿಲ್ಲ. ಈ ಭಾಗದ ಗ್ರಾಮಗಳಲ್ಲಿ ಕುರಿ ಮೇಕೆಯನ್ನು ತಿಂದ ಬಗ್ಗೆಯೂ ಮಾಹಿತಿಗಳಿಲ್ಲ. ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದರೆ ಚಿರತೆಯ ಹೆಜ್ಜೆ ಗುರುತು ಸ್ಪಷ್ಟವಾಗಿ ಕಂಡು ಬಂದಿವೆ ಎಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗ್ರಾಮ ಪಂಚಾಯಿತಿ ಪ್ರಕಟಣೆ ಹೊರಡಿಸಿ ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಬರದಂತೆ ಜನರಿಗೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.