ADVERTISEMENT

ಆನೇಕಲ್ | ಮಹಿಳೆ ಸಾವು: ಪತಿ ಪಾದರಸದ ಚುಚ್ಚುಮದ್ದು ನೀಡಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 2:19 IST
Last Updated 28 ನವೆಂಬರ್ 2025, 2:19 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಆನೇಕಲ್: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಹಿಳೆಯರೊಬ್ಬರು ಮೃತಪಟ್ಟಿದ್ದು, ಈಕೆಯ ಪತಿ ನೀಡಿದ ಪಾದರಸ ಇಂಜೆಕ್ಷನ್‌ನಿಂದಲೇ ಸಾವು ಸಂಭವಿಸಿದೆ ಎಂದು ಮೃತಳ ಸಂಬಂಧಕರು ಆರೋಪಿಸಿದ್ದಾರೆ. ಈ ಸಂಬಂಧ ಪತಿಯನ್ನು ಬಂಧಿಸಲಾಗಿದೆ.

ADVERTISEMENT

ಅತ್ತಿಬೆಲೆ ನಿವಾಸಿ ವಿದ್ಯಾ (36) ಮೃತ ಮಹಿಳೆ. ಈಕೆ ಪತಿ ಬಸವರಾಜು ಬಂಧಿತ. ಇವರ ತಂದೆ, ಮಾವ ಮಾವಮರಿಸ್ವಾಮಾಚಾರಿ ವಿರುದ್ಧ ದೂರು ದಾಖಲಾಗಿದೆ.

ವಿದ್ಯಾ ಫೆಬ್ರವರಿಯಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರೆ. ಚಿಕಿತ್ಸೆಗಾಗಿ ಹತ್ತಾರು ಆಸ್ಪತ್ರೆಗಳನ್ನು ಸುತ್ತಾಡಿದ್ದರು. ಕಳೆದ ಆರು ತಿಂಗಳು ಚಿಕಿತ್ಸೆ ಪಡೆಯುತ್ತಿದ್ದ ಅವರು ನ.24ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

‘ಪತಿ ತನಗೆ ಚಿನ್ನ ಕರಗಿಸಲು ಬಳಸುವ ಪಾದರಸವನ್ನು ಇಂಜೆಕ್ಷನ್‌ ಮೂಲಕ ತೊಡಗೆ ನೀಡಿದ್ದರು. ಇದರಿಂದಲೇ ತನ್ನ ಆರೋಗ್ಯ ಹದಗೆಟ್ಟಿತ್ತು. ಸಾವಿಗೆ ಪತಿಯೇ ಕಾರಣ’ ಎಂದು ಸಾಯುವ ಮುನ್ನ ವಿದ್ಯಾ ಹೇಳಿಕೆ ನೀಡಿದ್ದಾರೆ ಎಂದು ಈಕೆಯ ತಂದೆ ಅತ್ತಿಬೆಲೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧಾರಿಸಿ ಪೊಲೀಸರು ಖಾಸಗಿ ಕಾರ್ಖಾನೆಯ ಎಂಜಿನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾ ಅವರ ಪತಿ ಬಸವರಾಜು ಅವರನ್ನು ನ.25ರಂದು ಬಂಧಿಸಿದ್ದಾರೆ.

ಪಾದರಸದ ಇಂಜೆಕ್ಷನ್‌ ಕೊಟ್ಟಿದ್ದರಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ನೀಡಿರುವ ದೂರು ದಾಖಲಿಸಿಕೊಂಡು, ಶವ ಪರೀಕ್ಷೆ ನಡೆಸಲಾಗಿದೆ. ಜೊತೆಗೆ ಮೃತದೇಹದ ಮಾದರಿಯನ್ನು ಪರೀಕ್ಷೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಿಖರ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.