ADVERTISEMENT

ಸಾಯಿಬಾಬಾ 95ನೇ ಜನ್ಮ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 6:06 IST
Last Updated 26 ನವೆಂಬರ್ 2020, 6:06 IST
ಭಗವಾನ್ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಕಂಬಳಿಗಳನ್ನು ವಿತರಿಸಲಾಯಿತು
ಭಗವಾನ್ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಕಂಬಳಿಗಳನ್ನು ವಿತರಿಸಲಾಯಿತು   

ದೊಡ್ಡಬಳ್ಳಾಪುರ: ಇಲ್ಲಿನ ದೇವರಾಜನಗರದಲ್ಲಿರುವ ಭಗವಾನ್ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಸಾಯಿಬಾಬಾ ಅವರ 95ನೇ ಜನ್ಮದಿನ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮ ಅಂಗವಾಗಿ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿನ ರಾಷ್ಟ್ರೋತ್ಥಾನ ಗೋಶಾಲೆ ಗೋವುಗಳಿಗೆ ಹಣ್ಣು ವಿತರಿಸಲಾಯಿತು. ಸಂಜೆ ಸಾಯಿ ದೀಪಾರಾಧನೆಯೊಂದಿಗೆ ಸತ್ಯಸಾಯಿ ಭಜನೆ ನಡೆಯಿತು. ನಂತರ 40 ಮಂದಿ ಫಲಾನುಭವಿಗಳಿಗೆ ಕಂಬಳಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಾಯಿಸೇವಾ ಟ್ರಸ್ಟ್‌ ಅಧ್ಯಕ್ಷ ಎ.ಆರ್.ನಾಗರಾಜನ್‌, ಆಧ್ಯಾತ್ಮಿಕ ಚಿಂತನೆಯಿಂದ ಬದುಕು ಹಸನಾಗುತ್ತದೆ. ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೇವಾ ಸಮಿತಿ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕುರಿತಂತೆ ಹಲವು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಬಾರಿ ಕೋವಿಡ್ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ADVERTISEMENT

ಸಾಯಿ ಸೇವಾ ಟ್ರಸ್ಟ್‌ನ ಟ್ರಸ್ಟ್‌ ಎಸ್.ಎಲ್.ರಾಮಚಂದ್ರ, ಸಮಿತಿ ಎಂ.ಕೆ.ವಿಶ್ವನಾಥ್, ವಿನಯ್, ಬಿ.ಜೆ.ದೀಪಕ್, ಡಿ.ವಿ.ಭಾರ್ಗವ್, ಡಿ.ಆರ್.ಹರ್ಷ, ಜಗನ್ನಾಥ್‌ರೆಡ್ಡಿ, ಬಿ.ಜೆ.ದೀಪಕ್, ಬಿ.ಎಲ್.ಲಕ್ಷ್ಮಿನಾರಾಯಣ್, ಎಲ್.ಪಾರ್ವತಿಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.