
ವಿಜಯಪುರ (ದೇವನಹಳ್ಳಿ): ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಪುರಸಭೆ ಪೌರಕಾರ್ಮಿಕ ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪುರಸಭೆ ಉಪಾಧ್ಯಕ್ಷೆ ತಾಜುನ್ನಿಸಾಮಹಬೂಬ್ ಪಾಷಾ ಸೀರೆಗಳನ್ನು ವಿತರಿಸಿದರು.
‘ನಮ್ಮ ಜೀವನದಲ್ಲಿ ಸಂಪಾದನೆ ಮಾಡಿದ ಸ್ವಲ್ಪಭಾಗವನ್ನಾದರೂ ದಾನ ಮಾಡುವುದರಿಂದ ಆತ್ಮಸಂತೃಪ್ತಿ ಸಿಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರ ಸೇವೆ ಶ್ಲಾಘನೀಯ’ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಮಾತನಾಡಿ, ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ, ಗಣತಿ ಕಾರ್ಯ ಹೀಗೆ ಹಲವು ವಿಭಾಗಗಳಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಅಂಗನವಾಡಿ ನೌಕರರು ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕ ಮಹಿಳೆಯರಿಗೆ ರಾಷ್ಟ್ರೀಯ ಹಬ್ಬಕ್ಕೆ ಸೀರೆಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಸದಸ್ಯರಾದ ವಿ.ನಂದಕುಮಾರ್, ಬೈರೇಗೌಡ, ಸಿ.ನಾರಾಯಣಸ್ವಾಮಿ, ಸಿ.ಎಂ.ರಾಮು, ಕವಿತಾ ಮುನಿಆಂಜಿನಪ್ಪ, ಶಿಲ್ಪಾ ಅಜಿತ್, ಮುಖಂಡ ಮಹಬೂಬ್ ಪಾಷ, ಸೈಪುಲ್ಲಾ ಮತ್ತಿತರರು ಇದ್ದರು.