ಆನೇಕಲ್: ಪಟ್ಟಣದ ಸಂತೆಬೀದಿಯ ಓಂ ಆದಿಪರಾಶಕ್ತಿ ಪೀಠಂನಲ್ಲಿ ಶರನ್ನವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ನವರಾತ್ರಿಯ ಒಂಭತ್ತು ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಮಹಿಳೆಯರು ದೇವಿಗೆ ಮಡಿಲಕ್ಕಿ ಸಮರ್ಪಿಸಿ ತಮ್ಮ ಭಕ್ತಿಭಾವ ಮೆರೆಯುತ್ತಿದ್ದಾರೆ. ಶುಕ್ರವಾರದಂದು ಭಕ್ತರ ದಂಡು ಹೆಚ್ಚಾಗಿತ್ತು. ಭಕ್ತರು ದೇವಿಗೆ ನಿಂಬೆ ಹಣ್ಣಿನ ದೀಪ ಬೆಳಗಿದರು.
ಸೆ.27ರಂದು ವೆಂಕಟರಮಣಸ್ವಾಮಿ, ಸೆ.28ರಂದು ಸಂತಾನಲಕ್ಷ್ಮೀ, ಸೆ.29 ಸರಸ್ವತಿ, ಸೆ.30 ತಿರುವೇರ್ ಕಾಡು ಕರುಮಾರಿಯಮ್ಮ, ಅ.1 ಮಹಿಷಾಸುರ ಮರ್ಧಿನಿ, ಅ.2 ಆದಿಪರಾಶಕ್ತಿ ಅಲಂಕಾರ ಮಾಡಲಾಗುವುದು ಎಂದು ದೇವಾಲಯ ಸಮಿತಿಯ ಓಂಶಕ್ತಿ ವರದರಾಜು ತಿಳಿಸಿದರು.
ನವರಾತ್ರಿ ಪ್ರತಿದಿನ ಬೆಳಗ್ಗೆ 7ಕ್ಕೆ ಅಮ್ಮನವರಿಗೆ ಕಲಶಾಭಿಷೇಕ ಮಾಡಲಾಗುತ್ತಿದೆ. ಓಂಶಕ್ತಿ ದೇವಿಯನ್ನು ನಂಬಿ ಪೂಜಿಸುವುದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ವಿಜಯದಶಮಿಯ ದಿನವಾದ ಮಂಗಳವಾರ ಶಕ್ತಿಪೀಠದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.