ADVERTISEMENT

ದೊಡ್ಡಬಳ್ಳಾಪುರ| ಸಿದ್ಧರಾಮೇಶ್ವರರ ಜನೋಪಯೋಗಿ ಕಾಯಕ ಮಾದರಿ: ಶಾಸಕ ಧೀರಜ್ ಮುನಿರಾಜು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:21 IST
Last Updated 15 ಜನವರಿ 2026, 7:21 IST
ದೊಡಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಶಾಸಕ ಧೀರಜ್‌ ಮುನಿರಾಜು ಮಾತನಾಡಿದರು
ದೊಡಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಶಾಸಕ ಧೀರಜ್‌ ಮುನಿರಾಜು ಮಾತನಾಡಿದರು   

ದೊಡ್ಡಬಳ್ಳಾಪುರ: ಸಿದ್ಧರಾಮೇಶ್ವರರು ಶ್ರಮಿಕ ವರ್ಗದಲ್ಲಿ ಜನಿಸಿ, 12ನೇ ಶತಮಾನದಲ್ಲೇ ದೀರ್ಘಕಾಲಿನ ಜನೋಪಯೋಗಿ ಕೆಲಸಗಳ ಮೂಲಕ ವಚನಕಾರರಲ್ಲೇ ಭಿನ್ನವಾಗಿ ಗುರುತಿಸಿಕೊಂಡವರು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ಶಿವಯೋಗಿ ಶ್ರೀಸಿದ್ದರಾಮೇಶ್ವರ ಜಯಂತಿಯಲ್ಲಿ ಮಾತನಾಡಿದರು.

ಸಿದ್ಧದರಾಮೇಶ್ವರರ ಸಮಾಜಸೇವೆ ಇಂದಿಗೂ ಮಾದರಿ. ಅಂದು ಅವರು ಕಟ್ಟಿಸಿದ್ದ ಬಾವಿಗಳು ಇಂದಿಗೂ ಇತಿಹಾಸದಲ್ಲಿ ಉಳಿದಿವೆ ಎಂದರು.

ADVERTISEMENT

ಭೋವಿ ಸಮುದಾಯದ ಭವನ ನಿರ್ಮಾಣಕ್ಕೆ ನಿವೇಶನ ನೀಡಬೇಕೆಂದು ಮುಖಂಡರು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು, ಸಂಘಗಳಿಗೆ ನೇರವಾಗಿ ನಿವೇಶನ ನೀಡಲು ಅವಕಾಶವಿಲ್ಲ. ಘಾಟಿ ಕ್ಷೇತ್ರದಲ್ಲಿ ಭೋವಿ ಸಮುದಾಯಕ್ಕೆ ಮೀಸಲಿರಿಸಿರುವ ಜಾಗದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಬೇಕಿದೆ. ನಗರದಲ್ಲಿ ಸಿದೇಶ್ವರ ಸಮುದಾಯ ಭವನ ಸಮಾಜ ಕಲ್ಯಾಣ ಇಲಾಖೆ ಮೂಲಕ ನಿರ್ಮಾಣ ಮಾಡುವ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಮುಖಂಡರಾದ ಓಬದೇನಹಳ್ಳಿ ಮುನಿಯಪ್ಪ, ರಾಮಕೃಷ್ಣ ಮಾತನಾಡಿ, ಸಿದ್ಧರಾಮೇಶ್ವರರು ಸರಳ ಭಾಷೆಯ ಮೂಲಕ ಸಾಮಾನ್ಯ ಜನರೂ ಅರ್ಥಮಾಡಿಕೊಳ್ಳುವಂತೆ ಜೀವನದ ಮೌಲ್ಯಗಳನ್ನು ವಚನಗಳ ಮೂಲಕ ಅರಿತುಕೊಳ್ಳುವಂತೆ ರಚಿಸಿದ್ದಾರೆ. ಅವರೊಬ್ಬ ಮಹಾನ್ ಪವಾಡ ಪುರುಷರಾಗಿದ್ದು, ಅಂತಹ ಮಹನೀಯರ ಸಾಧನೆ ಎಲ್ಲರಿಗೂ ತಿಳಿಸಿಕೊಡುವ ಕೆಲಸವಾಗಬೇಕಿದೆ. ಭೋವಿ ಸಮುದಾಯವನ್ನು ನಿರ್ಲಕ್ಷಿಸದೇ ಅವರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡಬೇಕಿದೆ ಎಂದರು.

ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಸೇರಿದಂತೆ ಭೋವಿ ಸಮುದಾಯದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.