ADVERTISEMENT

ದೊಡ್ಡಬಳ್ಳಾಪುರ | ನಿರ್ಜನ ಪ್ರದೇಶದ ಮರದಲ್ಲಿ ನೇತಾಡುತ್ತಿತ್ತು ಅಸ್ಥಿಪಂಜರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 22:39 IST
Last Updated 19 ಫೆಬ್ರುವರಿ 2026, 22:39 IST
   

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್ ಬಳಿಯ ಕಾರ್ಖಾನೆಗೆ ಸೇರಿದ ನಿರ್ಜನ ಪ್ರದೇಶದಲ್ಲಿ ಮರವೊಂದರಲ್ಲಿ ನೇತಾಡುತ್ತಿದ್ದ ಅಸ್ಥಿಪಂಜರ ಗುರುವಾರ ಪತ್ತೆಯಾಗಿದೆ. 

ಗುರುವಾರ ನಿರ್ಜನ ಪ್ರದೇಶದ ಸ್ವಚ್ಚತಾ ಕಾರ್ಯದ ವೇಳೆ ಮರದ ಕೆಳಗೆ ಮೂಳೆಗಳು ದೊರೆತಿದ್ದು, ಮರದ ಮೇಲೆ ನೋಡಿದಾಗ ಬುರುಡೆ ನೇತಾಡುತ್ತಿರುವುದು ಕಂಡು ಬಂದಿದೆ. 

ಸುಮಾರು ಮೂರ‍್ನಾಲ್ಕು ತಿಂಗಳ ಹಿಂದೆ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ವ್ಯಕ್ತಿಯ ಗುರುತು, ವಿಳಾಸ ಪತ್ತೆಯಾಗಿಲ್ಲ.

ADVERTISEMENT

ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಮೃತನ ಬುರುಡೆ ಸೇರಿದಂತೆ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.