
ಮಾಗಡಿ: ತಾಲೂಕು ಆಡಳಿತದ ಸಿಬ್ಬಂದಿ ಮತ್ತು ತಹಶೀಲ್ದಾರ್ ಶರತ್ ಅವರು ರೈತರ ಕೆಲಸ ಮಾಡದೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ, ತಾಲ್ಲೂಕು ಪಂಚಾಯಿತಿ ಮುಂಭಾಗ ದಲಿತ ಸಂಘಟನೆ, ಕನ್ನಡಪರ ಮತ್ತು ರೈತ ಸಂಘಟನೆಗಳು ತಮಟೆ ಚಳವಳಿ ನಡೆಸಿದವು.
ತಾಲ್ಲೂಕು ಕಚೇರಿಯಲ್ಲಿ ರೈತರ ಯಾವುದೇ ಕೆಲಸಗಳು ನಡೆಯುತ್ತಿಲ್ಲ, ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿಗಳ ಮತ್ತು ಉಳ್ಳವರ ಪರವಾಗಿ ಕೆಲಸಗಳು ನಡೆಯುತ್ತಿವೆ. ಈ ಬಗ್ಗೆ ಯಾರು ಕೂಡ ಧ್ವನಿ ಎತ್ತುತ್ತಿಲ್ಲ. ರೈತರ ಕೆಲಸ ವಿಳಂಬ ಆಗುತ್ತಿದೆ ಎಂದು ಮುಖಂಡ ಕಣ್ಣೂರು ಮಾರುತಿಕುಮಾರ್ ದೂರಿದರು.
‘ನನ್ನ ಜಮೀನಿನ ದಾಖಲೆ ಸರಿಪಡಿಸಲು ಅರ್ಜಿ ಸಲ್ಲಿಸಿ, ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಕಚೇರಿಗಳಿಗೆ ಅಲೆದು ಸೂಸ್ತಾಗಿದೆ. ಇಲ್ಲಿ ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್’ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಆರೋಪಿಸಿ, ಭ್ರಷ್ಟ ಅಧಿಕಾರಿಗಳನ್ನು ತಾಲ್ಲೂಕಿನಿಂದ ವರ್ಗಾವಣೆ ಮಾಡಬೇಕಂದು ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿ ಪುಡಿಗಾಸಿನ ಆಸೆಗಾಗಿ ತಾಲ್ಲೂಕಿನ ರೈತರನ್ಬು ಬಲಿ ಪಶುಗಳಾಗಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ದೋರಣೆ ಮುಂದುವರೆದರೆ ರೈತರು ಅಧಿಕಾರಿಗಳ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಹಿರಿಯ ಮುಖಂಡ ಕಣ್ಣರೂ ರಮೇಶ್ ಎಚ್ಚರಿಕೆ ನೀಡಿದರು.
ತಾಲ್ಲೂಕು ಆಡಳಿತ ಸಿಬ್ಬಂದಿ ಹಾಗೂ ತಹಶೀಲ್ದಾರ್ ಅವರು ತಮ್ಮ ತಪ್ಪು ತಿದ್ದುಕೊಂಡು, ರೈತರು ಮತ್ತು ಸಾರ್ವಜನಿಕರ ಕೆಲಸವನ್ನು ಸಕಾಲದಲ್ಲಿ ಮಾಡದಿದ್ದರೆ ತಾಲ್ಲೂಕಿನಿಂದ ಸಹಸ್ರಾರು ಸಂಖ್ಯೆಯ ರೈರತು ಅರೆಬೆತ್ತಲೆ ಮರವಣಿಗೆ ನಡೆಸಲಿದ್ದಾರೆ ಎಂದು ಹೋರಾಟಗಾರ ಕನ್ನಡ ಕುಮಾರ್ ತಿಳಿಸಿದರು.
ದಲಿತ ಮುಖಂಡರಾದ ಮಾಡಬಾಳ್ ಜಯರಾಂ, ಗುಡೇಮಾರನಹಳ್ಳಿ ನಾಗರಾಜು, ಕನ್ನಡಪರ ಸಂಘನೆಯ ಮುಖಂಡ ಕುಮಾರ್, ರಾಷ್ಟ್ರೀಯ ಅಂಬೇಡ್ಕರ್ ಸೇನೆ ರಾಜ್ಯ ಉಪಾಧ್ಯಕ್ಷ ಗೋವಿಂದರಾಜ್, ನೆಲಮಂಗಲ ಲೋಕೇಶ್, ಕುಮಾರ್ ಜೆಡಿಎಸ್ ಮುಖಂಡ ದಿಲೀಪ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.