ವಿಜಯಪುರ(ದೇವನಹಳ್ಳಿ): ಪಟ್ಟಣದ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 2023-24 ನೇ ಸಾಲಿನ ಸಾಲಿನ ಸರ್ವ ಸದಸ್ಯರ ಮಹಾಸಭೆ ಹಾಗೂ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸೊಸೈಟಿಯ ಉಪಾಧ್ಯಕ್ಷ ಬಿ.ಸಿ.ಸಿದ್ದರಾಜು ಮಾತನಾಡಿ, ಸೊಸೈಟಿಯಿಂದ ಪ್ರತಿ ವರ್ಷ ಸೊಸೈಟಿಯ ಸದಸ್ಯರು ಹಾಗೂ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣ ಫಲಕ, ಪ್ರಶಸ್ತಿ ಪತ್ರದೊಂದಿಗೆ, 20 ಗ್ರಾಂ ಬೆಳ್ಳಿ ನಾಣ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸೊಸೈಟಿ ಅಧ್ಯಕ್ಷ ಎನ್.ರುದ್ರಮೂರ್ತಿ, ಸೊಸೈಟಿ ಮೂಲಕ ದೊರೆಯುವ ಸರಳ ಬಡ್ಡಿಯ ಸಾಲ ಪಡೆದುಕೊಂಡು ವ್ಯಾಪಾರಸ್ಥರು ತಮ್ಮ ವ್ಯಾಪಾರ ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದರು.
ಗೌರವ ಮುಖ್ಯ ಕಾರ್ಯನಿರ್ವಾಹಕಿ, ವಿಮಲಾ ಸಿದ್ದರಾಜು, ಹಿರಿಯ ಸದಸ್ಯ ಸಿ.ಬಸಪ್ಪ, ನಿವೃತ್ತ ಪೌರಾಯುಕ್ತ ವಿ.ಶಿವಕುಮಾರ್, ಸುರೇಶ್, ಆಡಳಿತ ಮಂಡಳಿಯ ನಿರ್ದೇಶಕರಾದ ಎಸ್.ರುದ್ರಮೂರ್ತಿ, ಎಸ್ ಮಂಜುನಾಥ್, ಬಿ.ನರೇಂದ್ರ ಕುಮಾರ್, ಜೆ.ನಂಜಣ್ಣ, ಕೆ.ಸಿ.ಭಾರತಿ ಶಿವಪ್ರಸಾದ್, ಎಸ್. ಮನೋಹರ್ ಬಾಬು, ಎಸ್.ಪುನೀತ್ ಕುಮಾರ್, ನರೇಂದ್ರ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.