ADVERTISEMENT

‘ವೈದ್ಯಕೀಯ ವೃತ್ತಿ ಸೇವೆಯಾಗಲಿ’

ಹೊಸಕೋಟೆ ಎಂ.ವಿ.ಜೆ ಆಸ್ಪತ್ರೆಯಲ್ಲಿ ಪದವಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 1:28 IST
Last Updated 23 ಜನವರಿ 2021, 1:28 IST
ಹೊಸಕೋಟೆ ಎಂ.ವಿ.ಜೆ ಕಾಲೇಜಿನಲ್ಲಿ ನಡೆದ ವೈದಕೀಯ ಪದವಿ ಪ್ರದಾನ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಜತೆಯಲ್ಲಿ ಶಾಸಕ ಶರತ್ ಬಚ್ಚೇಗೌಡ, ಕಾಲೇಜಿನಡಾ. ಮೋಹನ್, ಧರಣಿ ಮೋಹನ್ ಇದ್ದರು
ಹೊಸಕೋಟೆ ಎಂ.ವಿ.ಜೆ ಕಾಲೇಜಿನಲ್ಲಿ ನಡೆದ ವೈದಕೀಯ ಪದವಿ ಪ್ರದಾನ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಜತೆಯಲ್ಲಿ ಶಾಸಕ ಶರತ್ ಬಚ್ಚೇಗೌಡ, ಕಾಲೇಜಿನಡಾ. ಮೋಹನ್, ಧರಣಿ ಮೋಹನ್ ಇದ್ದರು   

ಹೊಸಕೋಟೆ: ಸಮಾಜದಲ್ಲಿ ಹಣಕ್ಕಾಗಿ ಸಂಸ್ಥೆಗಳನ್ನು ಕಟ್ಟಿ ನಡೆಸುವವರು ಬಹಳ ಮಂದಿ ಸಿಗುತ್ತಾರೆ. ಆದರೆ, ಶ್ರಮಪಟ್ಟು ಸಂಸ್ಥೆ ಕಟ್ಟಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವವರು ಬಹಳ ವಿರಳ. ಅಂತಹ ಸಾಲಿಗೆ ಎಂ.ವಿ.ಜೆ ಮೆಡಿಕಲ್ ಕಾಲೇಜಿನ ಸಂಸ್ಥಾಪಕ ಎಂ.ವಿ ಜಯರಾಂ ಸೇರುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.

ಅವರು ನಗರದ ಎಂ.ವಿ.ಜೆ ಆಸ್ಪತ್ರೆಯಲ್ಲಿ ನಡೆದ ಸಂಸ್ಥೆಯ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ತಾಲ್ಲೂಕಿನ ಸುತ್ತಮುತ್ತಲಿನಲ್ಲಿ ಆರ್ಥಿಕವಾಗಿ ಹಿಂದುಳಿದವವರಿಗೂ ವೈದಕೀಯ ಸೌಲಭ್ಯ ಸಂಸ್ಥೆ ನೀಡುತ್ತಿರುವುದು ಶ್ಲಾಘನೀಯ ವಿಚಾರ. ದೇಶದಲ್ಲಿ ಕಡಿಮೆ ಮೂಲಭೂತ ಸೌಲಭ್ಯ ಬಳಸಿಕೊಂಡು ಕೋವಿಡ್ ನಂತಹ ರೋಗಕ್ಕೆ ಔಷಧ ಕಂಡು ಹಿಡಿದು ಮೋದಿ ಅವರು ಭಾರತದ ಶಕ್ತಿ ಪ್ರಪಂಚಕ್ಕೆ ತೋರಿಸಿದ್ದಾರೆ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ವೈದಕೀಯ ಶಿಕ್ಷಣ ಕೇವಲ ವೃತ್ತಿಯಾಗಿ ಪರಿಗಣಿಸದೆ ಅದನ್ನು ಸೇವೆಯಾಗಿ ಸ್ವೀಕರಿಸಬೇಕು ಎಂದರು.

ಸಮಾಜದಲ್ಲಿ ಯಾರು ಸಹ ವೈದಕೀಯ ನೆರವು ಸಿಗದೆ ಇರಬಾರದು. ಆ ರೀತಿಯಾದಂತಹ ವ್ಯವಸ್ಥೆ ಮುಂದಿನ ದಿನಗಳಲ್ಲಿ ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಮತ್ತು ವೈದ್ಯರು ಆಲೋಚಿಸಬೇಕಾಗಿದೆ ಎಂದರು. ‌

ವಿಶ್ವ ಅರೋಗ್ಯ ಸಂಸ್ಥೆ ಪ್ರಕಾರ ಸಾವಿರ ರೋಗಿಗಳಿಗೆ ಒಬ್ಬ ವೈದ್ಯರಿರಬೇಕು. ಆದರೆ, ಈಗ ಭಾರತದಲ್ಲಿ ಅದರ ಪ್ರಮಾಣ 1600 ಜನರಿಗೆ ಒಬ್ಬ ವೈದ್ಯರಿದ್ದಾರೆ ಎಂದರು.

ಕೋವಿಡ್ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ ಆರೋಗ್ಯದ ಬಗ್ಗೆ ಆಲೋಚಿಸದೆ ರೋಗಿಗಳ ಸೇವೆ ಮಾಡಿದ್ದಾರೆ ಎಂದು ಕಾಲೇಜಿನ ಅಧ್ಯಕ್ಷ ಮೋಹನ್ ತಿಳಿಸಿದ್ದಾರೆ. ಕೋವಿಡ್ ಪ್ರಾರಂಭವಾದಾಗ ಇದರ ಬಗ್ಗೆ ಯಾವುದೇ ಮಾಹಿತಿ ಇರದಿದ್ದಾಗಲೂ ಅದರ ಪರಿಣಾಮ ತಿಳಿಯದಿದ್ದಾಗಲೂ ಕಾಲೇಜಿನ ಸಿಬ್ಬಂದಿ ಹಗಳಿರುಳು ಶ್ರಮಿಸಿದ್ದಾರೆ. ಇದಕ್ಕೆ ಪೂರಕವಾಗಿ ತಾಲ್ಲೂಕಿನ ಆಡಳಿತ ಮತ್ತು ಸರ್ಕಾರ ಎಲ್ಲ ರೀತಿಯ ನೆರವು ನೀಡಿದೆ ಎಂದರು.

2015ನೇ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. ಕಾಲೇಜಿನ ಮೂರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ ಮತ್ತು ರಾಜೀವ್ ಗಾಂಧಿ ವೈದಕೀಯ ವಿಶ್ವವಿದ್ಯಾನಿಲಯ 8ನೇ ರ್‍ಯಾಂಕ್ ಪಡೆದಿದ್ದಾರೆ. ಡಾ.ಅಪರ್ಣ ಎಂ.ಮೆನನ್ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು ಡಾ. ಎಂ.ವಿ. ಜಯರಾಂ ಚಿನ್ನದ ಪದಕ ಪಡೆದಿದ್ದಾರೆ. ರಾಜೇಶ್ ಮತ್ತು ಡಾ. ಉಮಾ ಮಹೇಶ್ವರಿ ಪಿ. ರ್‍ಯಾಂಕ್ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಧರಣಿ ಮೋಹನ್, ಪ್ರಾಂಶುಪಾಲರಾದ ರವಿಚಂದ್ರ, ಮೋಹನ್ ಹಾಗೂ ಡಾ.ಪ್ರಮೋದ್ ಇತರರುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.