ನಿಪ್ಪಾಣಿ: `ಕುಲಷಿತ ವಾತಾವರಣದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ. ಅದರಲ್ಲೂ ಮಕ್ಕಳ ಆರೋಗ್ಯ ಅತಿ ಪ್ರಮುಖವೆನಿಸಿದೆ. ಕೆ.ಎಲ್.ಇ ಸಂಸ್ಥೆ ಆ ನಿಟ್ಟಿನಲ್ಲಿ ಬಡಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸಾ ಶಿಬಿರದ ಲಾಭ ಎಲ್ಲರೂ ಪಡೆದುಕೊಳ್ಳಿ~ ಎಂದು ಕೆ.ಎಲ್.ಇ ಸಂಸ್ಥೆಯ ಉಪಕಾರ್ಯದರ್ಶಿ ಅಶೋಕ.ಜಿ.ಬಾಗೇವಾಡಿ ಸಲಹೆ ನೀಡಿದರು.
ಇಲ್ಲಿನ ಮಹಾತ್ಮಾಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಕೆ.ಎಲ್.ಇ ಸಂಸ್ಥೆಯ ಬೆಳಗಾವಿಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲಿ ಏರ್ಪಡಿಸಿದ್ದ ಅಂಗನವಾಡಿ ಮಕ್ಕಳ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಎಸ್.ಬಿ. ಕುಲಕರ್ಣಿ ಬಾಲ ಸಂಜೀವಿನಿ ಯೋಜನೆಯ ಸಮಗ್ರ ಮಾಹಿತಿ ನೀಡಿ, ಈ ವಿಭಾಗದ 80 ಮಕ್ಕಳು ಕೆ.ಎಲ್.ಇ ಆಸ್ಪತ್ರೆಯಲ್ಲಿ ಉಚಿತ ಉಪಚಾರ ಪಡೆದಿದ್ದಾರೆ ಎಂದು ತಿಳಿಸಿದರು.
ಜನಸಂಪರ್ಕ ಅಧಿಕಾರಿ ಪ್ರಮೋದ ಸೂಳಿಕೇರಿ ಮಾತನಾಡಿದರು. ಶಿಬಿರದಲ್ಲಿ 200 ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸಲಾಯಿತು.ಡಾ.ಪ್ರೀತಿ ಅಮರಖೇಡ, ಡಾ.ಈಶ್ವರ, ಡಾ.ರಿಂಕಲ್ ಮಕ್ಕಳನ್ನು ತಪಾಸಣೆ ನಡೆಸಿದರು.
ಡಾ.ಧನಂಜಯ ವಾಸುವಕರ, ಡಾ.ಸಂತೋಷ ಪತ್ತಾರ, ಡಾ.ಐ.ಟಿ. ಖಾನಾಪುರೆ, ಪ್ರಾಚಾರ್ಯ ಡಾ.ವಿ.ವಿ.ಬಾಂಗೇರಿ, ಪ್ರೊ.ಸಿ.ವಿ. ಕೊಪ್ಪದ, ಪ್ರೊ.ಜೆ.ಕೆ. ಸಾಬೋಜಿ, ಮತ್ತು ಪ್ರೊ.ಎಸ್.ಆರ್.ಕುಡಚೆ ಇದ್ದರು.
ಟಿ.ಒ.ಕುರಾಡೆ ಸ್ವಾಗತಿಸಿದರು. ಪ್ರಮೋದ ಸೂಳಿಕೇರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.