ADVERTISEMENT

ಬೆಳಗಾವಿ: 366 ಕೆ.ಜಿ. ಗಾಂಜಾ ನಾಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 8:21 IST
Last Updated 12 ಜೂನ್ 2021, 8:21 IST
ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ ಗಾಂಜಾ ಪದಾರ್ಥವನ್ನು ಶುಕ್ರವಾರ ಸುಟ್ಟು ನಾಶಪಡಿಸಲಾಯಿತು
ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ ಗಾಂಜಾ ಪದಾರ್ಥವನ್ನು ಶುಕ್ರವಾರ ಸುಟ್ಟು ನಾಶಪಡಿಸಲಾಯಿತು   

ಬೆಳಗಾವಿ: ವಿವಿಧ 77 ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ 366 ಕೆ.ಜಿ. ಗಾಂಜಾ ಪದಾರ್ಥವನ್ನು ನಿಯಮದಂತೆ ಶುಕ್ರವಾರ ನಾಶಪಡಿಸಲಾಯಿತು.

ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‌ ಮಾರ್ಗದರ್ಶನ ಹಾಗೂ ಅಪರಾಧ ವಿಭಾಗದ ಡಿಸಿಪಿ ಸಿ.ಆರ್. ನೀಲಗಾರ ಸಮ್ಮುಖದಲ್ಲಿ, ತಾಲ್ಲೂಕಿನ ಕಡೋಲಿಯ ಗುಂಜ್ಯಾನಟ್ಟಿಯ ಬಯಲು ಪ್ರದೇಶದಲ್ಲಿ ನಾಶಪಡಿಸಲಾಯಿತು. ಸಿಬ್ಬಂದಿಯು ಆಳವಾದ ಗುಂಡಿ ತೆಗೆದು ಗಾಂಜಾ ಹಾಕಿ ಬೆಂಕಿ ಹಚ್ಚಿ ಸುಟ್ಟರು. ಬಳಿಕ ಜೆಸಿಬಿಯಿಂದ ಗುಂಡಿ ಮುಚ್ಚಿ ಪ್ರಕ್ರಿಯೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT