ರಾಯಬಾಗ: ‘ಜನಹಿತ ಸಾಧಕರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ಭೌತಿಕ ಸಾಧನೆ ಸತ್ತ ನಂತರವೂ ನಿರಂತರವಾಗಿರುತ್ತದೆ. ಆದ್ದರಿಂದ ಜನಹಿತ ಸಾಧಕರಿಗೆ ಸಾವಿಲ್ಲ. ಇಂಥವರ ಸಾಲಿಗೆ ಸೇರುವ ಗ್ರಾಮೀಣ ಭಾಗದ ಸಾಧಕ ಕಲಾವಿದ ರಸೂಲ್ ಮೋಮಿನ್ ಅವರು ಕಾಲವಾದರೂ ಕಾಲಾತೀತವಾಗಿ ಬದುಕಿರುತ್ತಾರೆ’ ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಧರ್ ಇಂಗ್ಲಿಷ್ ಅಕಾಡೆಮಿಯ ಸಭಾ ಭವನದಲ್ಲಿ ಡಾ. ಯಲ್ಲಪ್ಪ ಹಿಮ್ಮಡಿ ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ರಸೂಲ್ ಮೋಮಿನ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಬಂಡಾಯ ಸಾಹಿತಿ ಪ್ರೊ. ಶಿವಾನಂದ ಬೆಳಕೂಡ, ಶ್ರೀಧರ್ ಕಿಚಡೆ, ಸಮಾಜ ಕಲ್ಯಾಣ ಇಲಾಖೆಯ ಶಂಕರ ಕೊಡತೆ ಮಾತನಾಡಿದರು.
ನ್ಯಾಯವಾದಿಗಳಾದ ಮಹದೇವ ಎಂ. ಪಾಟೀಲ್, ಅಜಿತ್ ಕಿಚಡೆ, ಪತ್ರಕರ್ತರಾದ ರಾಜು ಕಿಚಡೆ, ಸುಧೀರ್ ಕಳ್ಳೆ, ಪ್ರವೀಣ್ ಕಾಂಬಳೆ, ಪ್ರವೀಣ್ ದತ್ತವಾಡೆ, ಸೋಮು ಭಜಂತ್ರಿ ಇದ್ದರು. ದೀಪಕ್ ನಾಯಿಕ ವಂದಿಸಿದರು. ಕಾಂತು ಕೂಗೆ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.