ADVERTISEMENT

'ಬೆಳಗಾವಿ' ಎಂಬ ಪದಕ್ಕೆ ವಿಷಾದವಂತೆ! ಶಿವಾಜಿ ಪ್ರತಿಮೆ ಸ್ಥಾಪನೆಗೆ ಬರಲ್ಲ ಎಂದ ನಟ

ಛತ್ರಪತಿ ಶಿವಾಜಿ ಪಾತ್ರದಿಂದ ಬೆಳಕಿಗೆ ಬಂದ ನಟ, ಸಂಸದ ಅಮೋಲ್‌ ಕೋಲ್ಹೆ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 13:34 IST
Last Updated 4 ಮಾರ್ಚ್ 2023, 13:34 IST
ಅಮೋಲ್ ಕೋಲ್ಹೆ
ಅಮೋಲ್ ಕೋಲ್ಹೆ   

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಹಂಸಗಡದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಆಯೋಜಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಮರಾಠಿ ನಟ, ಸಂಸದ ಅಮೋಲ್ ಕೋಲ್ಹೆ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ವಿಡಿಯೊ ಹಾಕಿದ ಅವರು, ‘ಬೆಳಗಾವಿಯಲ್ಲಿ ಮಾರ್ಚ್‌ 5ರಂದು ಆಯೋಜಿಸಿದ ಕಾರ್ಯಕ್ರಮಕ್ಕೆ ಬರುವುದಾಗಿ ನಾನು ವಿಡಿಯೊ ಮೂಲಕ ಪ್ರಚಾರ ಮಾಡಿದ್ದೆ. ಆಗ ‘ಬೆಳಗಾವಿ’ ಎಂಬ ಪದ ಬಳಸಿದ್ದಕ್ಕೆ ಎಂಇಎಸ್‌ ಹಾಗೂ ಮಹಾರಾಷ್ಟ್ರದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಯಾವತ್ತೂ ಎಂಇಎಸ್‌ ಹಾಗೂ ಮರಾಠಿಗರ ಭಾವನೆಗಳೊಂದಿಗೆ ನಿಲ್ಲುತ್ತೇನೆ. ಮರಾಠಿಗರು ‘ಬೆಳಗಾಂವ’ ಪದ ಬಳಸುತ್ತಾರೆ. ‘ಬೆಳಗಾವಿ’ ಪದ ಬಳಸಿ ಅವಠಿಗರಿಗೆ ಬೇಸರ ಮಾಡಿದ್ದಕ್ಕೆ ನಾನು ವಿಷಾಧಿಸುತ್ತೇನೆ’ ಎಂದೂ ಎನ್‌ಸಿಪಿ ಮುಖಂಡರಾದ ಅಮೋಲ್‌ ಹೇಳಿದ್ದಾರೆ.

ರಂಗಭೂಮಿ, ಕಿರುತೆರೆ ಹಾಗೂ ಮರಾಠಿ ಚಲನಚಿತ್ರಗಳಲ್ಲಿ ಅಮೋಲ್‌ ಅವರು ಶಿವಾಜಿ ಮಹಾರಾಜರ ಪಾತ್ರಗಳನ್ನೇ ಹೆಚ್ಚಾಗಿ ನಿರ್ವಹಿಸಿ ಪ್ರಸಿದ್ಧಿ ಪಡೆದವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.