
ಪ್ರಜಾವಾಣಿ ವಾರ್ತೆ
ಬೆಳಗಾವಿ: ತಾಲ್ಲೂಕಿನ ಸಾಂಬ್ರಾದ ಏರ್‌ಮೆನ್ ತರಬೇತಿ ಶಾಲೆ(ಎಟಿಎಸ್)ಯಲ್ಲಿ ಶನಿವಾರ ಅಗ್ನಿವೀರವಾಯು ಪ್ರಶಿಕ್ಷಣಾರ್ಥಿಗಳ ಆರನೇ ತಂಡದ ನಿರ್ಗಮನ ಪಥಸಂಚಲನ ಶನಿವಾರ ನಡೆಯಿತು.
ಪುರುಷರು, ಮಹಿಳೆಯರು ಸೇರಿದಂತೆ 1,264 ಪ್ರಶಿಕ್ಷಣಾರ್ಥಿಗಳು 22 ವಾರಗಳ ಕಠಿಣ ತರಬೇತಿ ಪೂರ್ಣಗೊಳಿಸಿ, ದೇಶಸೇವೆಗೆ ಸನ್ನದ್ಧರಾದರು.
ಇಂಡಿಯನ್ ಏರ್‌ಫೋರ್ಸ್‌ನ ಅಸಿಸ್ಟೆಂಟ್ ಚೀಫ್ ಆಫ್ ದಿ ಏರ್ ಸ್ಟಾಫ್(ತರಬೇತಿ) ಏರ್ ವೈಸ್ ಮಾರ್ಷಲ್ ವೆಂಕಟ್ ಮರೆ ಅವರು ಗೌರವ ವಂದನೆ ಸ್ವೀಕರಿಸಿದರು.
‘ಇಲ್ಲಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರು ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು. ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕು’ ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.