
ಹಳ್ಳೂರ (ಮೂಡಲಗಿ): ’ಸರ್ಕಾರದ ಆದೇಶದಂತೆ ಅಂಗನವಾಡಿ ಕೇಂದ್ರಗಳಲ್ಲಿ ಜನವರಿ ತಿಂಗಳಿನಿಂದ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭವಾತ್ತಿದ್ದು, 3 ರಿಂದ 5 ವರ್ಷಗಳ ಮಕ್ಕಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಣ ನೀಡುತ್ತಿದ್ದಾರೆ ಪಾಲಕರು ಮಕ್ಕಳನ್ನು ಅಂಗನವಾಡಿಗಳಿಗೆ ಕಳಿಸಬೇಕು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೈ.ಕೆ. ಗದಾಡಿ ಅವರು ಹೇಳಿದರು.
ಗ್ರಾಮದ ಅಂಗನವಾಡಿ ಶಾಲೆ ಸಂಖ್ಯೆ 225ರಲ್ಲಿ ನಡೆದ ಸಕ್ಷಮ ಯೋಜನೆ ಅಡಿಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿ ಮಾತನಾಡಿದ ಅವರು, ’ಅರಬಾಂವಿ ಕ್ಷೇತ್ರದಲ್ಲಿ ಸದ್ಯ 115 ಅಂಗನವಾಡಿ ಕೇಂದ್ರಗಳನ್ನು ಸಕ್ಷಮ ಕೇಂದ್ರಗಳೆಂದು ಗುರುತಿಸಲಾಗಿದ್ದು, ಅಲ್ಲಿ ಟಿವಿಗಳನ್ನು ನೀಡಲಾಗಿದೆ‘ ಎಂದರು.
ಮಕ್ಕಳಿಂದ ಕೇಕ್ ಕಟ್ ಮಾಡಿ ಸಿಹಿ ಹಂಚಿ ಸಂಭ್ರಮಿಸಿ ಹೊಸ ವರ್ಷವನ್ನು ಸ್ವಾಗತಿಸಿದರು. ಕೇಂದ್ರಕ್ಕೆ ಆಗಮಿಸಿದ್ದ ಪಾಲಕರು ಟಿ.ವಿಯನ್ನು ಅನಾವರಣಗೊಳಿಸಿದರು.
ಅಂಗನವಾಡಿ ವಲಯ ಮೇಲ್ವಿಚಾರಕಿ ಆರ್.ಟಿ. ಗುಡದೇರಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ, ಮುಖಂಡರಾದ ದಿಲೀಪ್ ಗಣಾಚಾರಿ, ಸತ್ತೆಪ್ಪ ಮೇಲಪ್ಪಗೊಳ. ಇಬ್ರಾಹಿಂ ಮುಜಾವರ. ಸುರೇಶ ಭೂತಪ್ಪಗೋಳ, ಅಂಗನವಾಡಿ ಕಾರ್ಯಕರ್ತೆಯರಾದ ಬನದವ್ವಾ ಭೂತಪ್ಪಗೊಳ, ಗಂಗವ್ವ ಪಾಲಬಾಂವಿ, ರಾಜಶ್ರೀ ಕುಲಕರ್ಣಿ, ಸಾವಿತ್ರಿ ಕದಂ, ಆಶಾ ಭೂತಪ್ಪಗೊಳ, ಮಕ್ಕಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.