
ಹುಕ್ಕೇರಿ: ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ್ಯಂಟಿ ರ‍್ಯಾಗಿಂಗ್ ಸೆಲ್, ಆಂತರಿಕ ದೂರು ಸಮಿತಿ (ಐಸಿಸಿ) ಹಾಗೂ ಎನ್.ಎಸ್.ಎಸ್ ಘಟಕಗಳ ವತಿಯಿಂದ ‘ಆ್ಯಂಟಿ ರ‍್ಯಾಗಿಂಗ್’, ಲೈಂಗಿಕ ಕಿರುಕಳ ವಿರೋಧ, ಪೋಕ್ಸೊ ಕಾಯ್ದೆ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.
ವಕೀಲರ ಸಂಘದ ಕಾರ್ಯದರ್ಶಿ ಎಸ್.ಜಿ. ನದಾಫ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳು ನಡೆಸುವ ದೈಹಿಕ, ಮಾನಸಿಕ ಕಿರುಕುಳ ತಡೆಯುವುದು ಮತ್ತು ನಿಷೇಧಿಸುವುದು ಆ್ಯಂಟಿ ರ‍್ಯಾಗಿಂಗ್ ಉದ್ದೇಶವಾಗಿದೆ. ರ‍್ಯಾಗಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಪ್ರಾಚಾರ್ಯ ಪ್ರಕಾಶ ಲಕ್ಷೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್.ಎಸ್.ಎಸ್ ಯೋಜನಾಧಿಕಾರಿ ರವಿ ಪಾಟೀಲ, ಆ್ಯಂಟಿ ರ‍್ಯಾಗಿಂಗ್ ಸೆಲ್ ಮುಖ್ಯಸ್ಥೆ ರಾಣಿ ರತ್ನ ಪ್ರಭಾ ಕೆ.ವಿ. ಐಕ್ಯೂಎಸಿ ಸಂಯೋಜಕ ಪ್ರೊ.ಬಸವರಾಜ ವಾಸನ್, ಡಾ.ನಿರಂಜನ್ ಪಾಟೀಲ, ಪ್ರೊ.ಮುರುಮಕರ, ಪ್ರೊ.ಡಾಂಗೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ.ಸತೀಶ ಮೋಹಿತೆ ಸ್ವಾಗತಿಸಿದರು. ವಿದ್ಯಾರ್ಥಿನಿ ವರ್ಷಾ ಪೂಜೇರಿ ನಿರೂಪಿಸಿದರು. ಗ್ರಂಥಪಾಲಕಿ ಡಾ.ಆರತಿ ಕಬ್ಬೂರೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.