ADVERTISEMENT

ಮಣಿಪುರದಲ್ಲಿ ಸೇನಾ ವಾಹನ ಅಪಘಾತ: ಬೆಳಗಾವಿ ಜಿಲ್ಲೆಯ ಕುಪ್ಪನವಾಡಿ ಯೋಧ ಸಾವು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕುಪ್ಪನವಾಡಿ ಗ್ರಾಮದ ಯೋಧ ಧರ್ಮರಾಜ ಸುಭಾಷ ಖೋತ್ (42) ಮೃತಪಟ್ಟಿದ್ದಾರೆ.

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 7:07 IST
Last Updated 25 ಡಿಸೆಂಬರ್ 2024, 7:07 IST
<div class="paragraphs"><p>ಧರ್ಮರಾಜ ಸುಭಾಷ ಖೋತ</p></div>

ಧರ್ಮರಾಜ ಸುಭಾಷ ಖೋತ

   

ಬೆಳಗಾವಿ: ಈಶಾನ್ಯ ರಾಜ್ಯ ಮಣಿಪುರದ ಇಂಪಾಲಾ ಜಿಲ್ಲೆಯ ಬೊಂಬಾಲಾ ಪ್ರದೇಶದ ಇಂಪಾಲಾ ಕಣಿವೆಯಲ್ಲಿ ಮಂಗಳವಾರ ಸೇನಾ ವಾಹನ ಉರುಳಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕುಪ್ಪನವಾಡಿ ಗ್ರಾಮದ ಯೋಧ ಧರ್ಮರಾಜ ಸುಭಾಷ ಖೋತ್ (42) ಮೃತಪಟ್ಟಿದ್ದಾರೆ.

ಆರು ಯೋಧರು ಕರ್ತವ್ಯ ಮುಗಿಸಿಕೊಂಡು ಬರುತ್ತಿರುವಾಗ, ಕಣಿವೆ ಬಳಿ ಭೂಮಿ ಕುಸಿದು ವಾಹನ ಕಂದಕಕ್ಕೆ ಉರುಳಿತು. ಗಾಯಗೊಂಡ ಎಲ್ಲ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಆದರೆ ಧರ್ಮರಾಜ ಖೋತ್ ಅವರು ಅಲ್ಲೇ‌ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.