ADVERTISEMENT

ಮೂಡಲಗಿ: ಏಷಿಯನ್ ಟೇಕ್ವಾಂಡೋ ಕಂಚಿನ ಪದಕ ವಿಜೇತೆ ಲಕ್ಷ್ಮಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:41 IST
Last Updated 8 ಆಗಸ್ಟ್ 2025, 2:41 IST
ಮೇಲೇಷಿಯಾದಲ್ಲಿ ಈಚೆಗೆ ಜರುಗಿದ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್‌ ಷಿಪ್‌ನಲ್ಲಿ ಕಂಚಿನ ಪದಕ ಪಡೆದ ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮಿ ರಡರಟ್ಟಿ ಅವರನ್ನು ಗುರುವಾರ ಮೂಡಲಗಿಯಲ್ಲಿ ತೆರೆದ ಜೀಪದಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು
ಮೇಲೇಷಿಯಾದಲ್ಲಿ ಈಚೆಗೆ ಜರುಗಿದ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್‌ ಷಿಪ್‌ನಲ್ಲಿ ಕಂಚಿನ ಪದಕ ಪಡೆದ ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮಿ ರಡರಟ್ಟಿ ಅವರನ್ನು ಗುರುವಾರ ಮೂಡಲಗಿಯಲ್ಲಿ ತೆರೆದ ಜೀಪದಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು   

ಮೂಡಲಗಿ: ಮಲೇಷಿಯಾದಲ್ಲಿ ಏಷಿಯನ್‌ ಪ್ಯಾರಾ ಟೇಕ್ವಾಂಡೋ ಚಾಂಪಿಯಿನ್‌ ಷಿಪ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಭಾರತಕ್ಕೆ ಕೀರ್ತಿ ತಂದಿರುವ ಮೂಡಲಗಿಯ ಲಕ್ಷ್ಮಿ ಮಲ್ಲಪ್ಪ ರಡರಟ್ಟಿ ಗುರುವಾರ ಸಂಜೆ ತವರೂರಿಗೆ ಆಗಮಿಸಿದಾಗ ಅಭೂತಪೂರ್ವ ಸ್ವಾಗತ, ಸನ್ಮಾನಗಳು ಜರುಗಿದವು.

ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ರವೀಂದ್ರ ಸೋನವಾಲಕರ ಹಾಗೂ ನಿರ್ದೇಶಕರು ಸನ್ಮಾನಿಸಿ ಪುರಕ್ಕೆ ಬರಮಾಡಿಕೊಂಡರು. ಸಂಸ್ಥೆಯ ಆವರಣದಿಂದ ತೆರೆದ ಜೀಪದಲ್ಲಿ ಮೆರವಣಿಗೆ ಜರುಗಿತು.

ಜಾಂಝ ಪಥಕ ವಾದ್ಯ ಮೇಳ, ಮಂಜುನಾಥ ಸೈನಿಕ ತರಬೇತಿ ಪ್ರಶಿಕ್ಷಣಾರ್ಥಿಗಳ ಉದ್ದನೆಯ ಸಾಲು, ನೂರಾರು ಸಂಖ್ಯೆಯ ಮಹಿಳೆಯರು, ದಾರಿಯುದ್ದಕ್ಕೂ ಪಟಾಕಿ, ಬಾಣ, ಬಿರುಸುಗಳು ಮೆರವಣಿಗೆಗೆ ಮೆರಗು ನೀಡಿದವು. ದಾರಿಯುದ್ದಕ್ಕೂ ಲಕ್ಷ್ಮಿ ಸಾಧನೆಗೆ ಜೈಕಾರ ಹಾಕಿದರು.

ADVERTISEMENT

ಕಲ್ಮೇಶ್ವರ ವೃತ್ತದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪರವಾಗಿ ಅವರ ಆಪ್ತ ಸಹಾಯಕ ಸಿ.ಪಿ. ಯಕ್ಸಂಬಿ ಸನ್ಮಾನಿಸಿದರು.

ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎ.ವಿ. ಹೊಸಕೋಟಿ, ವಿಜಯಕುಮಾರ ಸೋನವಾಲಕರ, ಅನಿಲ ಸತರಡ್ಡಿ, ಶಿವು ಹೊಸೂರ, ಪ್ರಾಚಾರ್ಯ ಪ್ರೊ. ಎಸ್. ಎಲ್. ಚಿತ್ರಗಾರ, ಎಸ್.ಎಂ. ಕಮದಾಳ, ಆರ್.ಟಿ. ಲಂಕೆಪ್ಪನ್ನವರ, ಲಕ್ಷ್ಮೀ ತಂದೆ ಮಲ್ಲಪ್ಪ ರಡರಟ್ಟಿ, ಸಂತೋಷ ಸೋನವಾಲಕರ, ಮರೆಪ್ಪ ಮರೆಪ್ಪಗೋಳ, ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.