ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿರುವ ಅಥಣಿ ಕ್ಷೇತ್ರದಲ್ಲಿ ಶೇ 75.23ರಷ್ಟು ಮತದಾನವಾಗಿದೆ.
ಒಟ್ಟು 2,17,974 ಮತದಾರರ ಪೈಕಿ 1,65,370 ಮಂದಿ ಮತ ಚಲಾಯಿಸಿದ್ದಾರೆ. ಪುರುಷರು 86,291 ಹಾಗೂ ಮಹಿಳೆಯರು 79,079 ಮಂದಿ ಮತ ಹಾಕಿದ್ದಾರೆ.
ಕಾಗವಾಡದಲ್ಲಿ ಶೇ 76.27ರಷ್ಟು ಮತದಾನವಾಗಿದೆ. ಒಟ್ಟು 1,85,443 ಮಂದಿ ಪೈಕಿ 1,42,002 ಜನರು ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ ಪುರುಷರು 73,990 ಹಾಗೂಮಹಿಳೆಯರು 68,012.
2018ರ ಮೇನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಥಣಿಯಲ್ಲಿ ಶೇ 79.45 ಹಾಗೂ ಕಾಗವಾಡದಲ್ಲಿ ಶೇ 80ರಷ್ಟು ಮತದಾನವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಮತದಾರರ ಸಂಖ್ಯೆ ಜಾಸ್ತಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.