ADVERTISEMENT

ಬೆಳಗಾವಿ | ಎಟಿಎಂ ಯಂತ್ರ ಕಳವು: ಹಣ ಪಡೆಯಲು ವಿಫಲ ಯತ್ನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 18:26 IST
Last Updated 2 ಡಿಸೆಂಬರ್ 2025, 18:26 IST
<div class="paragraphs"><p>ಎಟಿಎಂ</p></div>

ಎಟಿಎಂ

   

(ಸಾಂದರ್ಭಿಕ ಚಿತ್ರ)

ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಹೆದ್ದಾರಿ ಪಕ್ಕದಲ್ಲಿದ್ದ ‘ಇಂಡಿಯಾ ಬ್ಯಾಂಕ್‌ 1’ಗೆ ಸೇರಿದ ಎಟಿಎಂ ಯಂತ್ರವನ್ನು ಸೋಮವಾರ ತಡರಾತ್ರಿ ಕಳವು ಮಾಡಿದ್ದಾರೆ. ಅದನ್ನು ಒಡೆದು ಹಣ ತೆಗೆಯಲು ಸಾಧ್ಯವಾಗದೇ ಊರ ಹೊರಗೆ ಎಸೆದು ಹೋಗಿದ್ದಾರೆ. ಮೂವರು ಆರೋಪಿಗಳು ಕೃತ್ಯ ಎಸಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. 

ADVERTISEMENT

‘ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು, ಸೆನ್ಸರ್‌ ಶಬ್ದ ಮಾಡದಂತೆ ತಡೆದಿದ್ದಾರೆ. ಯಂತ್ರವನ್ನು ಇಡಿಯಾಗಿ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಒಯ್ದಿದ್ದಾರೆ. 300 ಮೀಟರ್ ದಾಟಿದ ಬಳಿಕ ವಾಹನದಲ್ಲಿ ಒಯ್ದಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊಲದಲ್ಲಿ ಗ್ಯಾಸ್‌ ಕಟರ್‌ ಬಳಸಿ ಯಂತ್ರ ಒಡೆಯಲು ವಿಫಲ ಯತ್ನ ನಡೆಸಿ, ಹಾಗೇ ಬಿಟ್ಟು ಹೋಗಿದ್ದಾರೆ. ಯಂತ್ರವನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.

‘ಕಾವಲುಗಾರನ ನಿಯೋಜಿಸದಿರುವುದು ಬ್ಯಾಂಕ್‌ನವರ ನಿರ್ಲಕ್ಷ್ಯ. ಯಂತ್ರದಲ್ಲಿ ₹1 ಲಕ್ಷ ಹಣವಿತ್ತು ಎಂದು ತಿಳಿಸಲಾಗಿದೆ. ಸ್ಥಳೀಯರೇ ಕೃತ್ಯ ನಡೆಸಿರುವ ಸಾಧ್ಯತೆಯಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.