
ಪ್ರಜಾವಾಣಿ ವಾರ್ತೆ
ಬೈಲಹೊಂಗಲ: ನಗರದ ಶ್ರೀ ಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಭಕ್ತಿಭಾವದಿಂದ ಆರಂಭಗೊಂಡಿವೆ. ಇದೇ ಡಿ. 29ರಂದು ಜರುಗಲಿರುವ ಶ್ರೀ ಗುರು ಮಡಿವಾಳೇಶ್ವರ ಮಠದ ರಥೋತ್ಸವದ ಅಂಗವಾಗಿ ಗುರುವಾರ ಜವಳಿ ಕೂಟದಲ್ಲಿ ರಥ ಕಳಸಾರೋಹಣ ಕಾರ್ಯಕ್ರಮ ನೆರವೇರಿತು.
ವಿವಿಧ ವಾದ್ಯ ಮೇಳಗಳೊಂದಿಗೆ ಪಾಲಕಿ ಉತ್ಸವದ ಮೂಲಕ ಕಳಸವನ್ನು ಮೆರವಣಿಗೆಯಲ್ಲಿ ತರಲಾಯಿತು. ನಂತರ ರಥಕ್ಕೆ ಪೂಜಾ ವಿಧಿ ವಿಧಾನ ನೆರವೇರಿಸಿ ಕಳಸಾರೋಹಣ ನೆರವೇರಿಸಲಾಯಿತು. ಮಡಿವಾಳೇಶ್ವರ ಸ್ವಾಮೀಜಿ, ಶಿವಬಸಪ್ಪ ತುರಮರಿ, ಜಗದೀಶ ಕೊತಂಬರಿ, ಮಹಾಂತೇಶ ಅಕ್ಕಿ, ಉಮೇಶ ಬೋಳನ್ನವರ, ಗಿರೀಶ ಪಾಟೀಲ, ರವಿ ಹೊಸಮನಿ, ರುದ್ರಪ್ರಸಾದ್ ತುರಮರಿ, ಶಿವಾನಂದ ಹತ್ತರಕಿ, ಬಸವರಾಜ ಕಲಾದಗಿ, ಈರಪ್ಪ ಹಣಸಿ, ಪುಂಡಲೀಕ ಕಡಕೋಳ, ಮಹಾಂತೇಶ ಬಡಿಗೇರ, ಗಂಗಪ್ಪ ಹೊಸೂರ, ಮಡಿವಾಳಿ ಕರಡಿಗುದ್ದಿ, ತಮ್ಮನ್ನ ಬಡಿಗೇರ ಸೇರಿದಂತೆ ಅನೇಕ ಮುಖಂಡರು, ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.