ADVERTISEMENT

ಬೆಳಗಾವಿ: ಡೇರಿ ಮಹಾ ಮಂಡಲಕ್ಕೆ ಬಾಲಚಂದ್ರ ‍ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 19:09 IST
Last Updated 5 ಏಪ್ರಿಲ್ 2024, 19:09 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಬೆಳಗಾವಿ: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಾಷ್ಟ್ರೀಯ ಸಹಕಾರಿ ಡೇರಿ ಮಹಾ ಮಂಡಲದ (ಎನ್‍ಸಿಡಿಎಫ್‍ಐ) ನಿರ್ದೇಶಕರಾಗಿ ಪುನಃ ಆಯ್ಕೆಯಾಗಿದ್ದಾರೆ.

ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ಏ.4ರಂದು ನಡೆದ ಮಹಾ ಮಂಡಲದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಕರ್ನಾಟಕ ಹಾಲು ಒಕ್ಕೂಟದಿಂದ ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಾಲಚಂದ್ರ ಅವರು ಸತತ 2ನೇ ಅವಧಿಗೆ ಆಯ್ಕೆಯಾಗಿದ್ದಾರೆ.

ಉಳಿದಂತೆ, ಮೀನೇಶ್ ಶಾ (ಜಾರ್ಖಂಡ ಹಾಲು ಒಕ್ಕೂಟ), ಮಂಗಲ್‍ಜೀತ್ ರಾಯ್ (ಸಿಕ್ಕಿಂ ಹಾಲು ಒಕ್ಕೂಟ), ಶಾಮಲ್‍ಭಾಯ್ ಪಟೇಲ್ (ಗುಜರಾತ ಹಾಲು ಒಕ್ಕೂಟ), ರಣಧೀರ ಸಿಂಗ್ (ಹರಿಯಾಣ ಹಾಲು ಒಕ್ಕೂಟ), ಕೆ.ಎಸ್.ಮಣಿ (ಕೇರಳ ಹಾಲು ಒಕ್ಕೂಟ), ನರೀಂದರ್ ಸಿಂಗ್ ಶೇರ್ಗಿಲ್ (ಪಂಜಾಬ ಹಾಲು ಒಕ್ಕೂಟ), ಸಮೀರ್ ಕುಮಾರ್ ಪರೀದಾ (ಪಶ್ಚಿಮ್ ಆಸ್ಸಾಂ ಹಾಲು ಒಕ್ಕೂಟ) ಹಾಗೂ ಎನ್‍ಡಿಡಿಬಿ ನಿರ್ದೇಶಕ ಎಸ್.ರೇಗುಪತಿ ಅವರು ನಾಮನಿರ್ದೇಶಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಶುಕ್ರವಾರ ಜರುಗಿದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಜಾರ್ಖಂಡ್ ಹಾಲು ಒಕ್ಕೂಟದ ಮೀನೇಶ್ ಶಾ ಅವರು ಅವಿರೋಧವಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.