ಬೆಳಗಾವಿ: ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಜೀವಮಾನ ಸಾಧನೆಗಾಗಿ 2024ನೇ ಸಾಲಿನ ‘ಕಾದಂಬರಿ ಸಾಹಿತ್ಯ ಪ್ರಶಸ್ತಿ’ಗೆ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಿದೆ.
‘ಪ್ರಶಸ್ತಿಯು ₹50 ಸಾವಿರ ನಗದು, ಸ್ಮರಣಿಕೆ ಹೊಂದಿದೆ. ಮೇ 25ರಂದು ಸಮಾರಂಭ ನಡೆಯಲಿದೆ’ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
‘ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬರಗೂರಿನ ರಾಮಚಂದ್ರಪ್ಪ ಅವರು, ಬಸವರಾಜ ಕಟ್ಟೀಮನಿ ಅವರ ತತ್ವ– ಆದರ್ಶಗಳಂತೆ ಬರೆಯುತ್ತ, ಬದುಕು ನಡೆಸಿದ್ದಾರೆ. 13 ಕಾದಂಬರಿ ರಚಿಸಿದ್ದು, ಈ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.