ADVERTISEMENT

ಬೆಳಗಾವಿ | 11 ಸಾಧಕ ರೈತರಿಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 2:24 IST
Last Updated 8 ಫೆಬ್ರುವರಿ 2026, 2:24 IST
ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪಡೆದ ಬೆಳಗಾವಿ ಜಿಲ್ಲೆ ಸಾಧಕರ ರೈತರು
ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪಡೆದ ಬೆಳಗಾವಿ ಜಿಲ್ಲೆ ಸಾಧಕರ ರೈತರು   

ಬೆಳಗಾವಿ: ಕೃಷಿ ಕ್ಷೇತ್ರದಲ್ಲಿ ಮಾಡಿದ ಉತ್ತಮ ಸಾಧನೆಗಾಗಿ ಜಿಲ್ಲೆಯ 11 ರೈತರಿಗೆ 2024–25ನೇ ಸಾಲಿನ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಲಭಿಸಿದೆ. 

ಚಿಕ್ಕೋಡಿ ತಾಲ್ಲೂಕಿನ ಕಬ್ಬೂರಿನ ಸಿದ್ರಾಮ ನಡಟ್ಟಿ, ಜೋಡಕುರಳಿಯ ಸುಗಂಧಾ ಗುಡಿಮನಿ, ಮಾಯವ್ವ ಪೂಜೇರಿ, ಬೆಳಗಲಿಯ ಆನಂದರಾವ್‌ ಬೆಳಗಲಿ, ಕೆರೂರಿನ ಸದಾಶಿವ ಭಾತ್ಮಾರೆ, ಜೈನಾಪುರದ ಜಯಶ್ರೀ ಪಾಟೀಲ, ಬೈಲಹೊಂಗಲ ತಾಲ್ಲೂಕಿನ ನಾಗನೂರಿನ ಸಂಗವ್ವ ತಲ್ಲೂರ, ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಅವರಾದಿಯ ಲಕ್ಷ್ಮಿ ಹುಂಬಿ, ಚಿಕ್ಕನಂದಿಹಳ್ಳಿಯ ಸಿದ್ದಪ್ಪ ಉಳ್ಳೇಗಡ್ಡಿ, ಕೊಟಬಾಗಿಯ ಬಸಮ್ಮ ಲಗಮಣ್ಣವರ, ಖಾನಾಪುರ ತಾಲ್ಲೂಕಿನ ಕಡತನ ಬಾಗೇವಾಡಿಯ ಸುರೇಶ ಮ್ಯಾಗೇರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮತ್ತೆ ಮೂವರಿಗೂ ಪ್ರಶಸ್ತಿ

ADVERTISEMENT

2022–23ನೇ ಸಾಲಿನ ಪ್ರಶಸ್ತಿಗೆ ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿಯ ಆರತಿ ಪಾಟೀಲ, 2023–24ನೇ ಸಾಲಿನ ಪ್ರಶಸ್ತಿಗೆ ಖಾನಾಪುರ ತಾಲ್ಲೂಕಿನ ಘಸ್ಟೋಳ್ಳಿಯ ಗಂಗವ್ವ ತಳವಾರ, ಹಿರೇಮುನವಳ್ಳಿಯ ರಾಜಶ್ರೀ ಮುಕಾಟಿ ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಸಾಧಕ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. 

‘ರಾಜ್ಯದಲ್ಲೇ ಬೆಳಗಾವಿ ಜಿಲ್ಲೆಗೆ ಈ ಬಾರಿ ಹೆಚ್ಚಿನ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ’ ಎಂದು ಕೃಷಿ ಜಂಟಿನಿರ್ದೇಶಕ ಎಚ್.ಡಿ.ಕೋಳೇಕರ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.