
ಪ್ರಜಾವಾಣಿ ವಾರ್ತೆ
ಗಾಂಧಿ ಪ್ರತಿಮೆಗೆ ಅಪಮಾನ
ಬೆಳಗಾವಿ: ಇಲ್ಲಿನ ಹಿಂಡಲಗಾ ರಸ್ತೆಯ ಗಾಂಧಿ ಚೌಕ್‌ನಲ್ಲಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಸಾಂತಾ–ಕ್ಲಾಸ್ ಟೋಪಿ ಹಾಕಿ ಅವಮಾನ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಕ್ಯಾಂಪ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕ್ಯಾಂಪ್ ಪ್ರದೇಶದ ಬೋಸ್ ಲೈನ್‌ನ ಪಿಲಿಪ್ ಸಿಮೋನ್ ಸಪ್ಪರಪು(25), ಹಿಂದವಾಡಿಯ ಆದರ್ಶ ನಗರದ ಆದಿತ್ಯ ನವಜೀತ್ ಹೆಡಾ(25) ಬಂಧಿತರು.
‘ಡಿ.27ರಂದು ರಾತ್ರಿ ಇಬ್ಬರೂ ಈ ಕೃತ್ಯ ಎಸಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೊ ಆಧರಿಸಿ ತನಿಖೆ ಕೈಗೊಂಡಾಗ ಸಿಕ್ಕಿಬಿದ್ದಿದ್ದಾರೆ’ ಎಂದು ಕ್ಯಾಂಪ್ ಠಾಣೆ ಇನ್‌ಸ್ಪೆಕ್ಟರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.