ADVERTISEMENT

ಬೆಳಗಾವಿ | ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಇನ್‌ಸ್ಪೆಕ್ಟರ್ ಪುತ್ರನ ಸೆರೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:01 IST
Last Updated 23 ಮೇ 2025, 16:01 IST
<div class="paragraphs"><p>ಬಂಧನ </p></div>

ಬಂಧನ

   

ಬೆಳಗಾವಿ: ನಗರ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ 15 ವರ್ಷದ ಬಾಲಕಿಯನ್ನು ಪುಸಲಾಯಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ 17 ವರ್ಷದ ಮೂರನೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆತ ಬೇರೆ ಜಿಲ್ಲೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ವೊಬ್ಬರ ಮಗ ಎಂದು ಗೊತ್ತಾಗಿದೆ.

‘ಅತ್ಯಾಚಾರ ಎಸಗಿದವರು ಮೂವರೂ ಬಾಲಕರು ಎಂದು ಅಂದಾಜಿಸಲಾಗಿತ್ತು. ಆದರೆ, ಅವರಲ್ಲಿ ಇಬ್ಬರು ಮಾತ್ರ ಬಾಲಕರು. ಅವರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಇಲ್ಲಿನ ರುಕ್ಮಿಣಿನಗರದ ನಿವಾಸಿ ಸಾಕಿಬ್‌ ನಿಜಾಮ್‌ (22) ಮುಖ್ಯ ಆರೋಪಿ. ಅಪ್ರಾಪ್ತರಿಗೆ ಕೊಠಡಿಯನ್ನು ಬಾಡಿಗೆ ನೀಡಿದ ಆರೋಪದ ಮೇಲೆ ಫಾರ್ಮ್‌ಹೌಸ್‌ ಮಾಲೀಕರಾದ ಅಶುತೋಷ್‌ ಪಾಟೀಲ ಮತ್ತು ರೋಹನ್‌ ಪಾಟೀಲ ಎಂಬುವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶಾಲೆಯ ಬೇಸಿಗೆ ರಜೆ ಕಳೆಯಲು ನಗರಕ್ಕೆ ಬಂದಿದ್ದ ಬಾಲಕಿಯನ್ನು ಪುಸಲಾಯಿಸಿದ ಮೂವರು, ಮೇ 6ರಂದು ಫಾರ್ಮ್‌ಹೌಸ್‌ಗೆ ಕರೆದೊಯ್ದು ಪಾರ್ಟಿ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮೇ 12ರಂದು ಬಾಲಕಿ ಅನಾರೋಗ್ಯಕ್ಕೆ ಒಳಗಾದ ಬಳಿಕ ಪಾಲಕರಿಗೆ ವಿಷಯ ಗೊತ್ತಾಗಿ, ದೂರು ದಾಖಲಿಸಿದ್ದರು.

ಶುಕ್ರವಾರ ಇಬ್ಬರು ಬಾಲಕರ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಸಾಕೀಬ್‌ ವೈದ್ಯಕೀಯ ತಪಾಸಣೆ ಶನಿವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.