ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಳಗಾವಿ: ‘ಮಹಾನಗರ ಪಾಲಿಕೆಯಿಂದ ತ್ವರಿತವಾಗಿ ನಮಗೆ ಇ–ಆಸ್ತಿ ದಾಖಲೆ ನೀಡಬೇಕು’ ಎಂದು ಒತ್ತಾಯಿಸಿ, ಇಲ್ಲಿನ ಆಟೊ ನಗರ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳು ಪಾಲಿಕೆ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇ–ಆಸ್ತಿ ದಾಖಲೆ ನೀಡುವ ಪ್ರಕ್ರಿಯೆ ವಿಳಂಬ ಮಾಡಿದ ಪಾಲಿಕೆ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮ ಬಡಾವಣೆಯಲ್ಲಿ ಹಲವು ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳಿವೆ. ನಮ್ಮ ಬಳಿ ಇ–ಆಸ್ತಿ ದಾಖಲೆ ಇಲ್ಲದ್ದರಿಂದ ಬ್ಯಾಂಕ್‌ನವರು ಸಾಲ ಸೌಲಭ್ಯ ಕಲ್ಪಿಸುತ್ತಿಲ್ಲ. ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹಾಗಾಗಿ ಉದ್ಯೋಗ ನಡೆಸುವುದೇ ಕಷ್ಟಕರವಾಗಿದೆ. ಪ್ರಭಾವಿಗಳಿಗೆ ತಕ್ಷಣವೇ ದಾಖಲೆ ಕೈಗೆಟುಕುತ್ತದೆ. ಉಳಿದವರ ಸ್ಥಿತಿ ಬಿಗಡಾಯಿಸಿದೆ. ತಕ್ಷಣವೇ ಈ ಸಮಸ್ಯೆ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.