ಬೆಳಗಾವಿ: ‘ಶಾಂತಿ, ಸಹನೆ, ತಾಳ್ಮೆ ಜೀವನದ ಮಂತ್ರಗಳಾಗಬೇಕು. ಆ ಮೂಲಕ ಪರೋಪಕಾರ ಜೀವನ ಸಾಗಿಸಬೇಕೆಂಬ ಸಂದೇಶವನ್ನು ಭಗವಾನ ಮಹಾವೀರರು ನೀಡಿದ್ದಾರೆ’ ಎಂದು ಮೇಯರ್ ಮಂಗೇಶ ಪವಾರ ಹೇಳಿದರು.
ನಗರದ ಕುಮಾರ ರಂಗಂಮದಿರದಲ್ಲಿ ಗುರುವಾರ ಜರುಗಿದ ಭಗವಾನ್ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಹುಟ್ಟಿನಿಂದ ಯಾರೂ ಮೇಲಲ್ಲ, ಕೀಳಲ್ಲ. ತನ್ನ ಕಾಯಕದಿಂದ ಉತ್ತಮ ಅಥವಾ ಕನಿಷ್ಠನಾಗುತ್ತಾನೆಂಬ ಮಾತಿದೆ. ಮನಸ್ಸು, ವಚನ, ಕಾಯಕ ಶುದ್ಧಿಯಿಂದ ಆತ್ಮ ಸುಸಂಕೃತವಾಗುವುದೆಂಬ ದಿವ್ಯ ಮಂತ್ರ ಹೇಳಿಕೊಟ್ಟ ಮಾನವ ಸಮಾಜದ ಮಹಾ ಬೆಳಕಾಗಿದ್ದಾರೆ’ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಕಾಂತ ಶಾನವಾಡ ಉಪನ್ಯಾಸ ನೀಡಿದರು. ಉಪ ಮೇಯರ್ ವಾಣಿ ವಿಲಾಸ ಜೋಶಿ, ನಗರ ಸೇವಕರಾದ ಪ್ರಿಯಾ ಸಾತಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಗಣ್ಯರಾದ ಶಾಂತಿನಾಥ ಬುಡವಿ, ಸುನೀಲ ಚೌಗಲೆ, ಸಂತೋಷ ಸಾತಗೌಡ, ಸಾರ್ವಜನಿಕರು ಇದ್ದರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸುರೇಖಾ ಗೌರಗೊಂಡ ಹಾಗೂ ತಂಡದವರು ಭಜನೆ, ಪ್ರೇಮಾ ಉಪಾಧ್ಯೆ ತಂಡದವರು ನೃತ್ಯ ಪ್ರಸ್ತುತಿಸಿದರು.
Quote - ವೈಭೋಗದ ಜೀವನ ತ್ಯಜಿಸಿ ಕಠಿಣ ಸನ್ಯಾಸತ್ವ ಸ್ವೀಕರಿಸಿ ತಪಸ್ಸಿನಿಂದ ದಿವ್ಯಜ್ಞಾನ ಪಡೆದವರು ಮಹಾವೀರ. ಅಹಿಂಸೋ ಪರಮ ಧರ್ಮ ಎಂಬ ತತ್ವ ಕೊಟ್ಟಿದ್ದಾರೆ ಶ್ರೀಕಾಂತ ಶಾನವಾಡ ಉಪನ್ಯಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.